Kannada NewsKarnataka NewsLatest

ಬೆಳಗಾವಿ ವರ್ತಕರಿಗೆ 75 ಲಕ್ಷ ರೂ. ಪಂಗನಾಮ ಹಾಕಿ ವಿದೇಶಕ್ಕೆ ಹಾರಿದ್ದ ವ್ಯಕ್ತಿ ಮುಂಬೈಯಲ್ಲಿ ಬೆಳಗಾವಿ ಪೊಲೀಸ್ ಬಲೆಗೆ

ಮುಂಬೈಯಲ್ಲಿ ಬಂಧಿಸಿ ಕರೆ ತಂದ ಬೆಳಗಾವಿ ಪೊಲೀಸ ತಂಡ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸ್ಟೀಲ್ ಹಾಗೂ ಸಿಮೆಂಟ್ ವ್ಯವಹಾರದಲ್ಲಿ ಭಾರಿ ಲಾಭ ಸಿಗುತ್ತದೆ ಎಂದು ಹೇಳಿ ಬೆಳಗಾವಿ ವರ್ತಕರಿಂದ ಸುಮಾರು 75 ಲಕ್ಷ ರೂ. ಸಂಗ್ರಹಿಸಿ, ಹೆಂಡತಿ ಮಕ್ಕಳೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದ ಇಚಲಕರಂಜಿಯ ವ್ಯಕ್ತಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಎಸಿಪಿ ಎನ್.ವಿ.ಬರಮನಿ ನೇತೃತ್ವದ ತನಿಖಾ ತಂಡ ಕುಖ್ಯಾತ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದು, ಬಂಧಿತನ ವಿರುದ್ಧ ಮಹಾರಾಷ್ಟ್ರದಲ್ಲೂ ಹಲವು ಪ್ರಕರಣಗಳಿರುವುದು ಬೆಳಕಿಗೆ ಬಂದಿದೆ.

ಘಟನೆ ವಿವರ –

ದಿನಾಂಕ: 10/08/2021 ರಂದು  ಅರ್ಜುನ ಕಲ್ಲಪ್ಪ ಪಾಟೀಲ, ಸಾ ಜಾಫರವಾಡಿ, ಬೆಳಗಾವಿ ಇವರು ದೂರು ನಿಡಿದ್ದರಲ್ಲಿ, ಎಪಿಎಮ್‌ಸಿ ತರಕಾರಿ ಮಾರುಕಟ್ಟೆ ಹಾಗೂ ಇತರೇ ವರ್ತಕರಿಂದ ಸ್ಟೀಲ್ ಮತ್ತು ಸಿಮೆಂಟ್ ವ್ಯವಹರಾದಲ್ಲಿ ಹೆಚ್ಚಿನ ಲಾಭ ಸಿಗುತ್ತದೆ ಎಂದು ಹಣ ಪಡೆದು ಸುಮಾರು 75 ಲಕ್ಷ ದಷ್ಟು ಹಣವನ್ನು ಯಲ್ಲಪ್ಪ ಮನಗುತಕರ, ಸಾ: ಲಕ್ಷಟ್ ರಸ್ತೆ, ಬೆಳಗಾವಿ ರವರ ಮುಖಾಂತರ ಇಚಲಕರಂಜಿ ನಿವಾಸಿ ಶಿವಾನಂದ ನಾಡು ಕುಂಬಾರ, ವಯಸ್ಸು-46 ವರ್ಷ, ಎನ್ನುವವರಿಗೆ ಕೊಟ್ಟದ್ದು, ಹಣ ಮರಳಸದೇ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದರು.

ಯಲ್ಲಪ್ಪ ಮರಗುತಕರ ಹಾಗೂ ಶಿವಾನಂದ ಕುಂಬಾರ ಇವರ ಮೇಲೆ ಸಿಇಎನ್ ಅಪರಾಧ  ಠಾಣೆ ಗುನ್ನಾ ನಂ-20/2021 ಕಲಂ 405 420 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ತನಿಖೆಯನ್ನು  ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಎಸ್. ವಿ ಬರಮನಿ – ಎಪಿಸಿ ಅದರಾಧ ವಹಿಸಿಕೊಂಡಿದ್ದರು.  ತನಿಖೆಯಲ್ಲಿ ಆರೋಪಿ ಶಿವಾನಂದ ನಾಡು ಕುಂಬಾರ   ಸಾರ್ವಜನಿಕರಿಂದ ಪಡೆದ ಹಣ ಸ್ವಂತಕ್ಕೆ ಬಳಸಿಕೊಂಡು ಸಾರ್ವಜನಿಕರಿಗೆ ಮರಳಿ ಕೊಡಲಾಗದಾಗ ಅದರಿಂದ ತಪ್ಪಿಸಿಕೊಂಡು ಹೆಂಡತಿ -ಮಕ್ಕಳೊಂದಿಗೆ ಮಾಲ್ಡಿವೀಸ್, ಈಜಿಪ್ತ, ದುಬೈ ದೇಶಗಳಗೆ ಹೋಗಿ, ಕೊನೆಗೆ ನೇಪಾಳದಲ್ಲಿ ಬಂದಿದ್ದ ಬಗ್ಗೆ ಮಾಹಿತಿ ಪಡೆದುಕೊಂಡು, ನೇಪಾಳ ದೇಶದ ಪೊಲೀಸ್‌ರಿಗೆ ಇಂಟರ್‌ಪೋಲ್ ಮತ್ತು ದೂತಾವಾಸ ಮೂಲಕ ಸಂಪರ್ಕಿಸಿ ಆರೋಪಿಯ ಹಸ್ತಾಂತರ ಪ್ರಕ್ರಿಯೆಯಲ್ಲಿದ್ದಾಗ, ಆರೋಪಿಯು ತನ್ನ ಹಣಕಾಸಿನ ಅವಶ್ಯಕತ ಹಿನ್ನೆಲೆಯಲ್ಲಿ ಮುಂಬಯಿಗೆ ಬರುತ್ತಿರುವ ಬಗ್ಗೆ ಮಾಹಿತಿ ದೊರೆಯಿತು. ತಕ್ಷಣ ಅಲ್ಲಿಗೆ ತಂಡ ಕಳುಹಿಸಿಕೊಟ್ಟು, ದಿನಾಂಕ: 26/06/2022 ರಂದು ಬಾಂಬೆಯಲ್ಲಿ ನಿಂಗನಗೌಡ ಪಾಟೀಲ, ಪಿಐ ಸಿಸಿ ಹಾಗೂ ಸಿಬ್ಬಂದಿಯವರಾದ ಕಾಡಯ್ಯ ಚರಾಂಗಮಠ, ಮಹೇಶ ವಡೇಯರ್ ರವರ ತಂಡ ಆರೋಪಿತನನ್ನು ತಂದು ತನಿಖಾಧಿಕಾರಿ ಮುಂದೆ ಹಾಜರು ಪಡಿಸಿದ್ದಾರೆ.

ಆರೋಪಿತನ ವಿಚಾರಣೆಯಲ್ಲಿ ಆರೋಪಿಯು ಸಿಮೆಂಟ್ ಮತ್ತು ಸ್ಟೀಲ್ ವ್ಯವಹಾರದಲ್ಲಿ ಹೆಚ್ಚಿನ ಲಾಭ ಬರುತ್ತದೆ ಎಂದು ಜನರಿಗೆ ಪುಸಲಾಯಿಸಿ ಕೋಟ್ಯಾಂತರ ರೂಪಾಯಿ ಹಣ ಸಾರ್ವಜನಿಕರಿಂದ ಪಡೆದು   ಹಣ ತೊಡಗಿಸಿದವರಿಗೆ ಹೆಚ್ಚಿನ ಹಣ ಕೊಟ್ಟದ್ದು, ನಂತರ ಹೆಚ್ಚಿನ ಹಣ ಕೊಡುವ ಸಂದರ್ಭ ಬಂದಾಗ ತನ್ನ ಹಣ ಇಲ್ಲದಿದ್ದಾಗ ಕುಟುಂಬ ಸಮೇತ ತಲೆ ಮರೆಸಿಕೊಂಡು ಹೋಗಿದ್ದ.

ಅವ್ಯವಹಾರದಿಂದ ಕೆಲವು ಸ್ಥಿರಾಸ್ತಿಗಳನ್ನು ತನ್ನ ಹಾಗೂ ಕುಟುಂಬಸ್ಥರ ಹೆಸರಿನಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮಾಡಿದ ಬಗ್ಗೆ ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ  ನ್ಯಾಯಾಲಯದ ಅನುಮತಿ ಪಡೆದು ಕಲಂ 21(2)(3) ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ-2019 (BUDS Act-2019) ನೇದ್ದನ್ನು ಅಳವಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

ತನ್ನ ಹಾಗೂ ಕುಟುಂಬಸ್ಥರ ಹೆಸರಿನಲ್ಲಿ ಮಾಡಿದ ಸ್ಥಿರಾಸ್ತಿ ಹಾಗೂ ವಿವಿಧ ಬ್ಯಾಂಕುಗಳಲ್ಲಿ – ಸುಮಾರು 07 ಬ್ಯಾಕ್ ಖಾತೆಗಳನ್ನು ಫ್ರೀಜ್ ಮಾಡಿ ಸಕ್ಷಮ ಪ್ರಾಧಿಕಾರಕ್ಕೆ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಲಾಗಿದ್ದು, ಆರೋಪಿತನು ಕೊಟ್ಟದ್ಧ 20 ಲಕ್ಷ ರೂಪಾಯಿಗಳನ್ನು ಅವರ ಸ್ನೇಹಿತರು ಹಾಜರು ಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈತನ ಮೇಲೆ ಮಹಾರಾಷ್ಟ್ರ ರಾಜ್ಯದ ವಿವಿಧ ಜೊಸ್ ಠಾಣಿಗಳಲ್ಲಿ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಬಂದಿದೆ.

ಪ್ರಕರಣದಲ್ಲಿ ತನಿಖಾಧಿಕಾರಿ ಎಸ್. ಬರಮನಿ, ಎಸಿಪಿ ಆಪರಾಧ, ನಿಂಗನಗೌಡ ಪಾಟೀಲ ಪಿಐ ಸಿಸಿಐ ನ ಮೊದಲನ ತನಿಖಾಧಿಕಾರಿ ಬಿ ಆರ್ ಗಡ್ಡೇಕರ ಪಿಐ ಸಿಇಎಸ್ ಅಪರಾಧ ಪೊಲೀಸ್ ಠಾಣೆ   ಹಾಗೂ ಸಿಬ್ಬಂದಿಗಳಾದ ಮಹೇಶ, ಸುನೀಲ, ನಿಸುಣ್ಣವರ್, ಬಳಗನ್ನವರ, ಶಿವಾನಂದ, ಶಿವಲಂಗ, ಶ್ರೀಧರ, ಯಾಸಿನ್, ಸಂತೋಷ ಮತ್ತು ವಿಶೇಷ ಕರ್ತವ್ಯ  ಪ್ರಜ್ಞೆ ತೋರಿದ ಚರಲಿಂಗಮಠ ರವರನ್ನು ಪೊಲೀಸ್ ಆಯುಕ್ತರು ಮತ್ತು ಡಿಸಿಪಿ  ಪ್ರಶಂಸಿಸಿದ್ದಾರೆ.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button