Kannada NewsLatestNational

ವರದಕ್ಷಿಣೆಗಾಗಿ ಪತ್ನಿಗೆ ಹಗ್ಗ ಕಟ್ಟಿ ಬಾವಿಯಲ್ಲಿ ತೂಗಾಡಿಸಿದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ, ಭೋಪಾಲ್: ಪತ್ನಿ ವರದಕ್ಷಿಣೆ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕೈಗೆ ಹಗ್ಗ ಕಟ್ಟಿ ಬಾವಿಗೆ ಇಳಿಬಿಟ್ಟಿರುವ ಘಟನೆ ಮಧ್ಯಪ್ರದೇಶದ ನೀಮಚ್‌ನಲ್ಲಿ ನಡೆದಿದೆ.

ರಾಕೇಶ್ ಕಿರ್ ಎಂಬ ವ್ಯಕ್ತಿ ತನ್ನ ಪತ್ನಿ ಉಷಾ ಅವರ ಕೈಗಳನ್ನು ಕಟ್ಟಿ ಬಾವಿಯಲ್ಲಿ ತೂಗುಹಾಕಿದ್ದ. ಆಕೆ ತವರುಮನೆಯಿಂದ ಐದು ಲಕ್ಷ ರೂ. ವರದಕ್ಷಿಣೆ ತರಲು ಒಪ್ಪಿಕೊಳ್ಳುವವರೆಗೂ ಮೇಲಕ್ಕೆತ್ತದೆ ಪಟ್ಟು ಹಿಡಿದಿದ್ದ. ತಮ್ಮನ್ನು ರಕ್ಷಿಸುವಂತೆ ಉಷಾ ಅವರು ಗೋಳಾಡುತ್ತಿದ್ದ ದೃಶ್ಯ 40 ಸೆಕೆಂಡ್ ಗಳ ವಿಡಿಯೊದಲ್ಲಿ ದಾಖಲಾಗಿದೆ. ನಂತರ ಈ ವಿಡಿಯೊವನ್ನು ಪತ್ನಿಯ ತವರುಮನೆಯವರಿಗೆ ಕಳುಹಿಸಿದ್ದು ತವರಿನವರು ಗ್ರಾಮದ ಪರಿಚಯಸ್ಥರನ್ನು ಸಂಪರ್ಕಿಸಿ ಉಷಾ ಅವರನ್ನು ರಕ್ಷಿಸಲು ಕೋರಿದ್ದಾರೆ.

Home add -Advt

ಉಷಾ ಅವರು ಮಧ್ಯಪ್ರದೇಶದ ಜಾವಾದ್‌ನ ಕಿರ್ಪುರ ನಿವಾಸಿ ರಾಕೇಶ್ ಕೀರ್ ಜತೆ ವಿವಾಹವಾಗಿದ್ದರು. ಘಟನೆ ಕುರಿತು ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿ ರಾಕೇಶ್‌ನನ್ನು ಬಂಧಿಸಲಾಗಿದೆ.

Related Articles

Back to top button