ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಹಳೆಯ ಪಿಂಚಣಿ ಯೋಜನೆ ಮರು ಜಾರಿಗಾಗಿ ದೇಶಾದ್ಯಂತ ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರು ಒತ್ತಾಯಿಸುತ್ತಿರುವ ಮಧ್ಯೆಯೇ ಹಳೆ ಹಾಗೂ ಹೊಸ ಪಿಂಚಣಿ ಯೋಜನೆಗಳೆರಡನ್ನೂ ಇರಿಸಿಕೊಂಡು ಹೊಸ ಮಾರ್ಗ ಕಂಡುಕೊಳ್ಳಲು ಕೇಂದ್ರ ಸರಕಾರ ಅಣಿಯಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಲೋಕಸಭೆಯಲ್ಲಿ ಹಣಕಾಸು ಮಸೂದೆ ಮಂಡಿಸುವ ಸಂದರ್ಭದಲ್ಲಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು (ಎನ್ಪಿಎಸ್) ಸುಧಾರಣೆ ಅಗತ್ಯತೆ ಬಗ್ಗೆ ಒತ್ತಿ ಹೇಳಿದ್ದಾರೆ.
ಎನ್ಪಿಎಸ್ ಸುಧಾರಣೆ ನಿಟ್ಟಿನಲ್ಲಿ ಹಣಕಾಸು ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿಯ ರಚನೆ ಕುರಿತು ಪ್ರಸ್ತಾಪಿಸಿರುವ ನಿರ್ಮಲಾ ಸೀತಾರಾಮನ್, ಸರಕಾರದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆಯಾಗದಂತೆ ಮತ್ತು ನೌಕರರಿಗೂ ಸಮಾಧಾನವಾಗುವ ರೀತಿಯಲ್ಲಿ ಹೊಸ ಮಾರ್ಗೋಪಾಯ ಕಂಡುಕೊಳ್ಳಲು ಅವರು ಉತ್ಸುಕರಾಗಿದ್ದಾರೆ.
ಸರಕಾರಿ ನೌಕರರಿಗೆ ಎನ್ಪಿಎಸ್ ಅಡಿ ಪಡೆದ ಕೊನೆಯ ಸಂಬಳದ ಸುಮಾರು ಶೇ.50 ರಷ್ಟು ಖಾತರಿ ಪಿಂಚಣಿ ನೀಡುವ ಮೂಲಕ ಬೊಕ್ಕಸಕ್ಕೆ ಅಧಿಕ ಹೊರೆಯಾಗದಂತೆ ಈಗಿರುವ ಎನ್ ಪಿಎಸ್ ನಲ್ಲಿ ಬದಲಾವಣೆ ಮಾಡುವ ಸಾಧ್ಯತೆಗಳ ಬಗ್ಗೆ ಕೇಳಿಬಂದಿದ್ದು ಇನ್ನೂ ನಿಖರವಾದ ನಿರ್ಧಾರಗಳು ಹೊರಬಿದ್ದಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ