*ನಾನು ಹಿಂದೂ ಎಂದು ಹಿಂದೂ ಮಹಿಳೆ ಜೊತೆ ಲಾಡ್ಜ್ ಗೆ ಹೋಗಿದ್ದ ಅನ್ಯಕೋಮಿನ ವ್ಯಕ್ತಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಹಿಂದೂ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡು ಅನ್ಯಕೋಮಿನ ಯುವಕ ಹಿಂದು ಮಹಿಳೆ ಜೊತೆ ಲಾಡ್ಜ್ ಗೆ ಹೋಗಿದ್ದ ವೇಳೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಹಿಂದೂ ಮಹಿಳೆಯೊಬ್ಬರ ಜತೆ ಲಾಡ್ಜ್‌ಗೆ ಹೋಗಿದ್ದ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಬ್ದುಲ್ ಸಮದ್ (42) ಬಂಧಿತ ಆರೋಪಿ. ಶೃಂಗೇರಿ ತಾಲ್ಲೂಕಿನ 38 ವರ್ಷದ ಹಿಂದೂ ಮಹಿಳೆಯೊಬ್ಬರ ಜತೆ ಲಾಡ್ಜ್‌ಗೆ ಹೋಗಿದ್ದ ಸಮದ್, ಇಬ್ಬರೂ ಗಂಡ-ಹೆಂಡತಿ ಎಂದು ಹೇಳಿ ಲಾಡ್ಜ್‌ನಲ್ಲಿ ರೂಮ್ ಪಡೆದಿದ್ದರು. ಆದರೆ, ಲಾಡ್ಜ್ ಸಿಬ್ಬಂದಿಗೆ ಅನುಮಾನ ಬಂದಿದ್ದು, ಗುರುತಿನ ಚೀಟಿಯನ್ನು ಪರಿಶೀಲಿಸಿದಾಗ ಅದು ನಕಲಿ ಎಂಬುದು ಗೊತ್ತಾಗಿದೆ. ಅಬ್ದುಲ್ ಸಮದ್ ತನ್ನ ಅಸಲಿ ಹೆಸರನ್ನು ಬದಲಿಸಿ ರಮೇಶ್ ಎಂಬ ಹೆಸರಿನಲ್ಲಿ ಆಧಾರ್ ಕಾರ್ಡ್ ಎಡಿಟ್ ಮಾಡಿಸಿಕೊಂಡಿದ್ದನು.
ಸ್ಥಳಕ್ಕೆ ಬಂದ ಶೃಂಗೇರಿ ಪೊಲೀಸರು, ಅಬ್ದುಲ್ ಸಮದ್ ಮತ್ತು ಆತನ ಜತೆಗಿದ್ದ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ಅಬ್ದುಲ್ ಸಮದ್ ಬೇರೆ ಕೋಮಿನ ವ್ಯಕ್ತಿಯಾಗಿದ್ದು, ಮಹಿಳೆ ಜತೆ ಸಂಬಂಧ ಬೆಳೆಸಲು ಹಿಂದೂ ಹೆಸರಿನಲ್ಲಿ ಗುರುತಿನ ಚೀಟಿ ನಕಲಿ ಮಾಡಿಸಿಕೊಂಡಿದ್ದುದು ದೃಢಪಟ್ಟಿದೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.