Kannada NewsKarnataka NewsLatest
ಬೆಳಗಾವಿ ಹೊರವಲಯದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ದಾಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿ ಹಂತಕ್ಕೆ ಮೇಲ್ದರ್ಜೆಗೇರುತ್ತಿರುವ ಮಚ್ಚೆಯಲ್ಲಿ ದೊಡ್ಡ ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸ್ ದಾಳಿ ನಡೆದಿದೆ.
ಭಾನುವಾರ ರಾತ್ರಿ ಸುಮಾರು 15ಕ್ಕೂ ಹೆಚ್ಚು ಜನರು ದುಡ್ಡು ಹಾಕಿ ಇಸ್ಪೀಟ್ ಆಡುತ್ತಿರುವಾಗ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.
ಈ ವೇಳೆ ಕೆಲವರು ಪರಾರಿಯಾಗಿದ್ದು, 12 ಜನರು ಪೊಲೀಸ್ ಬಲೆಗೆ ಬಿದ್ದಿದ್ದಾರೆ. 83 ಸಾವಿರ ರೂ. ನಗದು, 16 ಬೈಕ್, 12 ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ದೇವಸ್ಥಾನದ ಹುಂಡಿಯಲ್ಲಿ ನಕಲಿ ನೋಟು; ಪ್ರಚೋದನಕಾರಿ ಬರಹ
ಜ.16ರಂದು ಅಮಿತ್ ಶಾ ಬೆಳಗಾವಿಗೆ – ರಮೇಶ್ ಜಾರಕಿಹೊಳಿ ಮಾಹಿತಿ
ಲೈಂಗಿಕ ತಜ್ಞೆ ಡಾ.ಪದ್ಮಿನಿ ಪ್ರಸಾದ ಜೊತೆ ಚಾಟ್ ಮಾಡುತ್ತಿದ್ದೀರಾ? – ಈ ಸುದ್ದಿ ಓದಿ


