Kannada NewsKarnataka NewsLatest

ಕೊರೋನಾ ಗದ್ದಲದ ಮಧ್ಯೆ ಡಿಡಿಪಿಐ ಕಚೇರಿಗೆ ಬಂದ ಉರಗ

https://youtu.be/V-Kaoac_xTk

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಡೀ ವಿಶ್ವವೇ ಕೊರೋನಾ ಗದ್ದಲದಲ್ಲಿ ಮುಳುಗಿದ್ದರೆ ಬೆಳಗಾವಿಯ ಡಿಡಿಪಿಐ ಕಚೇರಿಗೆ ಉರಗವೊಂದು ಪ್ರವೇಶಿಸಿ ಒಂದಿಷ್ಟು ಹೊತ್ತು ಎಲ್ಲರನ್ನೂ ತಬ್ಬಿಬ್ಬುಗೊಳಿಸಿತು.

ಇದ್ದಕ್ಕಿದ್ದಂತೆ ಕ್ಲಬ್ ರಸ್ತೆಯಲ್ಲಿರುವ ಡಿಡಿಪಿಐ ಕಚೇರಿಯಲ್ಲಿ ಹಾವೊಂದು ಕಾಣಿಸಿತು. ಅಲ್ಲಿನ ಸಿಬ್ಬಂದಿ ಮತ್ತು ಕೆಲಸಗಳಿಗಾಗಿ ಆಗಮಿಸಿದ್ದವರು ಕಂಗಾಲಾದರು. ನಂತರ ಉರಗ ತಜ್ಞರನ್ನು ಕರೆಸಿ ಹಿಡಿಸಲಾಯಿತು. ಉರಗ ತಜ್ಞ ಹಾವನ್ನು ಹಿಡಿದು ಅದನ್ನು ಹೆಗಲೆ ಮೇಲೆ ಹಾಕಿಕೊಂಡು ಓಡಾಡುವುದನ್ನು ಕಂಡವರು ಮೂಕ ವಿಸ್ಮಿತರಾದರು.

ಹಾವನ್ನು ಹಿಡಿದು ಆತ ಒಯ್ದ ನಂತರ ಅಲ್ಲಿದ್ದವರೆಲ್ಲ ನಿಟ್ಟುಸಿರು ಬಿಟ್ಟರು. ಕೊರೋನಾ ಸುದ್ದಿಯಲ್ಲೇ ಮುಳುಗಿದ್ದವರು ಒಂದಿಷ್ಟು ಹೊತ್ತು ಬೇರೆ ಲೋಕಕ್ಕೆ ಹೋಗುವಂತೆ ಮಾಡಿತು ಹಾವು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button