Kannada NewsKarnataka NewsLife StyleNationalPoliticsTech

*ಗಗನಯಾತ್ರಿಗಳನ್ನು ಬಿಟ್ಟು ಭೂಮಿಗೆ ಮರಳಿದ ಬಾಹ್ಯಾಕಾಶ ನೌಕೆ*

ಪ್ರಗತಿವಾಹಿನಿ ಸುದ್ದಿ: ಬೋಯಿಂಗ್‌ನಲ್ಲಿ ಹಾನಿಗೊಳಗಾದ ಸ್ಟಾರ್‌ಲೈನ‌ರ್ ಕ್ಯಾನ್ಸುಲ್ ಶನಿವಾರ ನ್ಯೂ ಮೆಕ್ಸಿಕೋದ ವೈಟ್ ಸ್ಯಾಂಡ್ಸ್ ಸ್ಪೇಸ್ ಹಾರ್ಬ‌್ರನಲ್ಲಿ ಯಶಸ್ವಿಯಾಗಿ ಇಳಿಯಿತು ಎಂದು NASA ತಿಳಿಸಿದೆ. 

ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ನೋರ್ ಅವರನ್ನು ಬಿಟ್ಟು ಗಗನಯಾನಿ ನೌಕೆ ಬಂದಿದ್ದು, ಮುಂದಿನ ಫೆಬ್ರವರಿಯಲ್ಲಿ ಈ ಗಗನಯಾತ್ರಿಗಳು ಭೂಮಿಗೆ ಮರಳಲಿದ್ದಾರೆ.

ಇನ್ನು ಕ್ಯಾಪ್ಸುಲ್ ತನ್ನ ಪ್ರಯಾಣವನ್ನು ಪೂರ್ಣಗೊಳಿಸಲು ಆರು ಗಂಟೆಗಳನ್ನು ತೆಗೆದುಕೊಂಡಿತು. ಹೀಲಿಯಂ ಸೋರಿಕೆ ಸೇರಿದಂತೆ ತಾಂತ್ರಿಕ ದೋಷಗಳನ್ನು ಅನುಭವಿಸಿದ ನಂತರ ಬಾಹ್ಯಾಕಾಶ ನೌಕೆಯು ಗಗನಯಾತ್ರಿಗಳಿಲ್ಲದೆ ಮನೆಗೆ ಮರಳಬೇಕಾಯಿತು.

ವಿಕ್ಟೋರ್ ಮತ್ತು ಸುನೀತಾ ವಿಲಿಯಮ್ಸ್ ಐಎಸ್‌ಎಸ್‌ನಲ್ಲಿ ಹೆಚ್ಚುವರಿ ಆಹಾರ ಮತ್ತು ಸರಬರಾಜುಗಳನ್ನು ಹೊಂದಿದ್ದು ಫೆಬ್ರವರಿ 2025 ರಲ್ಲಿ ಸ್ಪೇಸ್‌ಎಕ್ಸ್ ವಾಹನದಲ್ಲಿ ಭೂಮಿಗೆ ಹಿಂತಿರುಗುತ್ತಾರೆ. ಆರಂಭದಲ್ಲಿ ಎಂಟು ದಿನಗಳ ಪರೀಕ್ಷೆ ಎಂದು ಭಾವಿಸಲಾಗಿದ್ದ ಸಿಬ್ಬಂದಿಗೆ ಎಂಟು ತಿಂಗಳ ಕಾರ್ಯಾಚರಣೆಯಾಗಿ ಮಾರ್ಪಟ್ಟಿದೆ.

Home add -Advt

Related Articles

Back to top button