Kannada NewsKarnataka NewsLatest

ಏ. 23ರಂದು ‘ಶ್ರೀ ರಾಮಕೃಷ್ಣ ಚರಿತ್ರಂ’ ನೃತ್ಯ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ‘ನಾಟ್ಯೋಲ್ಲಾಸ 2’ ನೃತ್ಯ ಸರಣಿ ಕಾರ್ಯಕ್ರಮದ ಅಂಗವಾಗಿ ಇಲ್ಲಿನ ನಾಟ್ಯಾಲಯ ಇನ್ಸ್ಟಿಟ್ಯೂಟ್ ಭಾರತ ಸರಕಾರದ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ಶ್ರೀ ರಾಮಕೃಷ್ಣ ಚರಿತ್ರಂ’ ಆಯೋಜಿಸಿದೆ.

ಏಪ್ರಿಲ್ 23ರಂದು ಸಂಜೆ 6 ರಿಂದ 8ರವರೆಗೆ ಬೆಳಗಾವಿ ನಗರದ ಟಿಳಕ ಚೌಕದ ಲೋಕಮಾನ್ಯ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ.

ಸ್ಥಳೀಯ ರಾಮಕೃಷ್ಣ ಮಿಷನ್ ನ ಮಹಂತ ಸ್ವಾಮಿ ಆತ್ಮಪ್ರಾಣಾನಂದಜಿ ಮಹಾರಾಜರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಅತಿಥಿಯಾಗಿ ಬೆಳಗಾವಿಯ ರವಿ ನೃತ್ಯಕಲಾ ಕೇಂದ್ರದ ಗುರು ರವೀಂದ್ರ ಶರ್ಮಾ ಭಾಗವಹಿಸಲಿದ್ದಾರೆ.

ವಿದುಷಿ ರೇಖಾ ಅಶೋಕ ಹೆಗಡೆ ನೃತ್ಯ ನಿರ್ದೇಶಿಸಿದ್ದು ಕಾರ್ಯಕ್ರಮವು ಪ್ರೇಕ್ಷಕರಿಗೆ ಮುಕ್ತವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Home add -Advt

https://pragati.taskdun.com/world-earth-day-meditation-this-time-for-peace-vibration/

https://pragati.taskdun.com/let-parents-and-students-work-plans-for-summer-vacation-like-this/
https://pragati.taskdun.com/many-including-town-panchayat-members-joined-the-bjp/

Related Articles

Back to top button