ವಿಚಿತ್ರ ಕ್ರೈಂ ಪ್ರಕರಣ ; ಟ್ರ್ಯಾಕ್ಟರ್ ಗೆ ಸಿಕ್ಕಿ ಸತ್ತ ಸ್ನೇಹಿತನನ್ನು ಬಿಸಾಕಿ ಹೋದರು

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ ; ತಾಲೂಕಿನ ಹುಲ್ಲೋಳಿ ಹಟ್ಟಿ ಗ್ರಾಮದಲ್ಲಿ ಕಳೆದ ಎರಡು ವಾರಗಳಿಂದ ನಾಪ್ತೆಯಾಗಿದ್ದ ವ್ಯಕ್ತಿಯ ಶವವಾಗಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಹುಲ್ಲೋಳಿ ಹಟ್ಟಿ ಗ್ರಾಮದ ಯುವಕ ಬಾಬು ಮಲ್ಲಿಕ್‌ಸಾಬ ಮುಲ್ತಾನಿ (೨೧) ವ್ಯಕ್ತಿ ನಾಪತ್ತೆಯಾಗಿದ್ದನೆಂದು ಆತನ ಮನೆಯವರು ಪ್ರಕಣ ದಾಖಲಿಸಿದ್ದರು.

ಇದೇ ಸಮಯದಲ್ಲಿ ತಾಲೂಕಿನ ಯಮಕಮರಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘೊಡಗೇರಿ ಗ್ರಾಮದಲ್ಲಿ ಶವವೊಂದು ಕೊಳೆತು ದುರ್ವಾಸನೆ ಬರುತ್ತಿದೆ ಎಂದು ಗ್ರಾಮದ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಾಗಿತ್ತು.
ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣ ಶೆಟ್ಟಿ ನೇತೃತ್ವದಲ್ಲಿ ಹುಕ್ಕೇರಿ ಹಾಗೂ ಯಮಕಮರಡಿ ಪೊಲೀಸ್ ತನಿಖೆ ಕೈಗೊಂಡ ತಂಡ ಮೃತ ವ್ಯೆಕ್ತಿ ಬಾಬು ಮುಲ್ತಾನಿ ಸ್ನೆಹಿತ ಅದೇ ಗ್ರಾಮದ ಟ್ಯಾಕ್ಟರ ಚಾಲಕನಾದ ರಮೇಶ ಕುಗಟೋಳ್ಳಿ ಜೊತೆ ಹೋಗಿದ್ದನೆಂದು ಮೃತ ವ್ಯಕ್ತಿ ಪಾಲಕರು ಸಂಶಯ ವ್ಯಕ್ತಪಡಿಸಿ ಮಾಹಿತಿ ನೀಡಿದರು.
ಹುಲ್ಲೋಳಿಹಟ್ಟಿ ಗ್ರಾಮದ ಚಾಲಕ ರಮೇಶ ಕಗುಟೋಳ್ಳಿಯನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಡಿಸೆಂಬರ್ ೮ರಂದು ಕಬ್ಬು ತುಂಬಿಕೊಂಡು ಸಕ್ಕೆರೆ ಕಾರಖಾನೆ ಹೋಗಿ ಮರಳಿ ಬರುವಾಗ ಬೆಳಗ್ಗಿನ ಜಾವ ೫ಗಂಟೆಗೆ ಸಂಕೇಶ್ವರ ಕಡೆಯಿಂದ ಹುಕ್ಕೇರಿ ಬರುತ್ತಿರುವಾಗ ಜಾಬಾಪೂರ ಬಳಿ ರೋಡಬ್ರೇಕ್ (ಹಂಪ್ಸ) ದಾಟುವ ಸಮಯದಲ್ಲಿ ಟ್ಯಾಕ್ಟರ್ ನಿಂದ ಬಾಬು ಪುಟಿದು ಟ್ಯಾಕ್ಟರದ ದೊಡ್ಡ ಚಕ್ರದಲ್ಲಿ ಸಿಲುಕಿ ಮೃತಪಟ್ಟಿದ್ದ ಇದರಿಂದ ಹೆದರಿದ ಚಾಲಕ ನನ್ನಮೇಲೆ ಬರುತ್ತಿದೆ ಎಂದು ಶವವನ್ನು ಅದೇ ಟ್ಯಾಕ್ಟರ ನೋಗಿನಾಳ ಹತ್ತಿರ ಸೇತುವೆ ಬದಿಯಲ್ಲಿ ಗಿಡಗಂಟ್ಟಿಯಲ್ಲಿ ಬಿಸಾಕಿರುವುದಾಗಿ ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾನೆಂದು ಸಿಪಿಐ ಗುರುರಾಜ ಕಲ್ಯಾಣ ಶೆಟ್ಟಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ