ಖಾನಾಪುರ ತಾಲೂಕಾ ಕ್ಷತ್ರಿಯ ಮರಾಠ ಪರಿಷತ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಖಾನಾಪುರ ತಾಲೂಕಾ ಕ್ಷತ್ರಿಯ ಮರಾಠ ಪರಿಷತ್ ವತಿಯಿಂದ ಗುರುವಾರ ಕ್ಷತ್ರಿಯ ಮರಾಠ ಸಮಾಜದ ಮಹಾಧರ್ಮಗುರು ಶ್ರೀ ಮಂಜುನಾಥ ಭಾರತೀ ಮಹಾಸ್ವಾಮಿಗಳ ಗುರುವಂದನಾ ಕಾರ್ಯಕ್ರಮ ನಡೆಯಿತು.
ಕರಂಬಾಳ್ ಕ್ರಾಸ್ ನ ಪಾಟೀಲ ಗಾರ್ಡನ್ ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಮರಾಠ ಸಮಾಜದ ಪ್ರೇರಕರಾದ ಜಗದ್ಗುರು ಬಸವೇಶ್ವರ, ಭಾರತ ರತ್ನ ಬಾಬಾಸಾಹೇಬ ಅಂಬೇಡ್ಕರ್, ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳಿಗೆ ಮಾಲಾರ್ಪಣೆ ಹಾಗೂ ನಮನ ಸಲ್ಲಿಸುವ ಮೂಲಕ ಬೆಳಗ್ಗೆ 12 ಗಂಟೆಗೆ ಕಾರ್ಯಕ್ರಮ ಆರಂಭವಾಯಿತು.
ಕ್ಷತ್ರೀಯ ಮರಾಠಾ ಸಮಾಜದ ತಾಲೂಕಾ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಮಾತನಾಡಿ, ಸಮಾಜದವರು ಒಗ್ಗಟ್ಟಾಗದಿದ್ದರೆ ಯಾವುದೇ ಅಧಿಕಾರ, ಸೌಲಭ್ಯ ಪಡೆಯಲು ಸಾಧ್ಯವಿಲ್ಲ. ನಾವೆಲ್ಲರೂ ಒಂದಾಗಿ ಮುಂದಿನ ದಿನಗಳಲ್ಲಿ ಸಮಾಜದ ಏಳ್ಗೆಗಾಗಿ ಶ್ರಮಿಸೋಣ ಎಂದರು.
ಶಾಹಿರ್ ವೆಂಕಟೇಶ್ ಮತ್ತು ಕುಟುಂಬದವರಿಂದ (ಹಿಂಡಲಗಾ) ಕಾರ್ಯಕ್ರಮವು ಪ್ರಾರಂಭವಾಯಿತು. ಸ್ವಾಮೀಜಿಯವರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಖಾನಾಪುರ ಕ್ಷತ್ರೀಯ ಮರಾಠಾ ಪರಿಷತ್ ಆಯೋಜಿಸಿತ್ತು.
ಕರ್ನಾಟಕ ರಾಜ್ಯಾಧ್ಯಕ್ಷರಾದ ಸುರೇಶರಾವ್ ಸಾಠೆ,.ಮೋಹನನಾಥಜಿ ಸ್ವಾಮಿ, ಭಗವಾನಗಿರಿ ಮಹಾರಾಜ್, ಸುನೀಲರಾವ್ ಚವ್ಹಾಣ, ಉಪಾಧ್ಯಕ್ಷ, ವೆಂಕಟೇಶರಾವ್ ಚವ್ಹಾಣ ಖಜಾಂಚಿ, ಕೆಕೆಎಂಪಿ ಜಿಲ್ಲಾ ಉಪಾಧ್ಯಕ್ಷ ದಿಲೀಪ್ ರಾವ್ ಪವಾರ್, ಅಧ್ಯಕ್ಷ ಅಭಿಲಾಷ ದೇಸಾಯಿ, ಖಾನಾಪುರ ತಾಲೂಕಾ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್, ಖಾನಾಪುರ ಮೇಯರ್ ಮಜರ ಖಾನಾಪುರಿ, ನ್ಯಾಯವಾದಿ ಎಚ್.ಎನ್.ದೇಸಾಯಿ, ಖಾನಾಪುರ ನಗರಾಧ್ಯಕ್ಷೆ ಮಾರುತಿ ಪಾಟೀಲ, ರಮೇಶ ಪಾಟೀಲ, ಗೋವಿಂದ ಪಾಟೀಲ, ಅಪ್ಪಯ್ಯ ಹರಿಬೋಳ್, ಅರ್ಜುನ್‌ಗೌಡ, ಅನಂತಗೌಡ, ಕಿರಣ್ ಯೆಳ್ಳೂರಕರ್, ರಾಜೇಶ ಬಳ್ಳೂರಕರ್, ವಾಸುದೇವ್ ತಿಪ್ಪನವರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭುರುಂಕಿ, ಜ್ಞಾನೇಶ್ವರ್ ಲಾಡ್, ಸಂಜಯ್ ಸೋನಾಲ್ಕರ್, ರಾಹುಲ್ ಆಳ್ವಾನಿ ಬಾಳೇಶ್ ಚನ್ನಣ್ಣನವರ್, ಕುಶಾಲ್ ಅಂಬೋಜಿ, ಹುಂಡಾರೆ, ಭಾರತಿ ತಕಡಿ ಹಾಗೂ ಇಟಗಿ, ಪಾರಿಶ್ವಾಡ, ಜಾಂಬೋಟಿ, ಹಲಶಿ, ನಿಂಗನಮಠ, ಲೋಂಡಾ, ಕರ್ಲಗಾ, ಹೆಬ್ಬಾಳ, ಕ್ಷೇತ್ರದ ಪುರುಷರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ