*ಕೆಎಲ್ಎಸ್ ಜಿಐಟಿಯಲ್ಲಿ ಮೂರು ದಿನಗಳ ಪ್ರಾಧ್ಯಾಪಕರ ಕಾರ್ಯಾಗಾರ ಯಶಸ್ವಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಕೆಎಲ್ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ರಸಾಯನಶಾಸ್ತ್ರ ವಿಭಾಗ ಇದೇ ಜನವರಿ 17 ರಿಂದ 19 ರವರೆಗೆ “ನ್ಯಾನೊತಂತ್ರಜ್ಞಾನದ , ಸವಾಲುಗಳು ಮತ್ತು ಭವಿಷ್ಯ”ದ ಕುರಿತು ಮೂರು -ದಿನಗಳ ಪ್ರಾಧ್ಯಾಪಕರ ತರಬೇತಿ ಕಾರ್ಯಾಗಾರ ಯಶಸ್ವಿಯಾಗಿ ನಡೆಸಿತು. ಇದರಲ್ಲಿ ರಾಜ್ಯದ ವಿವಿಧ ಮಹಾವಿದ್ಯಾಲಯದಿಂದ 40 ಅಧ್ಯಾಪಕರು ಭಾಗವಹಿಸಿದ್ದರು.
ಪ್ರಸ್ತುತ ಹಾಗೂ ಭವಿಷ್ಯದಲ್ಲಿ ನ್ಯಾನೊತಂತ್ರಜ್ಞಾನದ ಸಮಗ್ರ ಬಳಕೆ ಕುರಿತು ವಿವಿಧ ವಿಷಯಗಳ ಪರಿಣಿತ ತಂತ್ರಜ್ಞ ರಾದ ಸ್ಕೂಲ್ ಆಫ್ ಎಲೆಕ್ಟ್ರಿಕಲ್ ಸೈನ್ಸಸ್, ಐಐಟಿ ಗೋವಾದ ಸಹಾಯಕ ಪ್ರದ್ಯಪಕ ಡಾ. ಬಿಧನ್ ಪ್ರಮಾಣಿಕ್, ಐಐಟಿ ದಾರವಾಡಿನ, ಸಹಾಯಕ ಪ್ರಾಧ್ಯಾಪಕಿ ಡಾ. ರುಮಾ ಘೋಷ್, ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯದ ನ್ಯಾನೋ ಮತ್ತು ವಸ್ತು ವಿಜ್ಞಾನಗಳ ಕೇಂದ್ರದ ಪ್ರಾಧ್ಯಾಪಕ ಡಾ.ಸಿದ್ದಪ್ಪ ಎ.ಪಾಟೀಲ್ , ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯದ ನ್ಯಾನೋ ಮತ್ತು ಮೆಟೀರಿಯಲ್ ಸೈನ್ಸಸ್ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಮಹೇಶ್ ಎಸ್.ಪದಕಿ , ಕೆಎಲ್‌ಎಸ್ ಜಿಐಟಿ, ಬೆಳಗಾವಿಯ ನ್ಯಾನೊಸಿನ್ಸ್ ಮತ್ತು ನ್ಯಾನೊತಂತ್ರಜ್ಞಾನ ಕೇಂದ್ರದ ಸಂಯೋಜಕರಾದ ಡಾ. ರವಿರಾಜ್ ಎಂ ಕುಲಕರ್ಣಿ , ಗೋವಾದ ಬಿಟ್ಸ್ ಪಿಲಾನಿಯ ಪ್ರಾಧ್ಯಾಪಕ ಡಾ.ನರೇಂದ್ರನಾಥ ಘೋಷ್ ಮಾಹಿತಿ ಒದಗಿಸಿದರು.
ಡಾ.ಸಿ.ವಿ. ಯೆಳಮಗ್ಗದ, ವಿಜ್ಞಾನಿ ಎಫ್, ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರ (ಸಿಇಎನ್ಎಸ್), ಬೆಂಗಳೂರು ಅವರು ಇಂಧನ ಕಾಳಜಿ ಮತ್ತು ಕ್ರಿಯಾತ್ಮಕ ಹೈಬ್ರಿಡ್ ಮೆಟೀರಿಯಲ್ಸ್ ಕುರಿತು ಆಹ್ವಾನಿತ ಭಾಷಣ ಮಾಡಿದರು.
ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಿನ್ಸಿಪಾಲ್ ಮತ್ತು ಮ್ಯಾನೇಜ್‌ಮೆಂಟ್ , ಅಧ್ಯಾಪಕರ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ರಸಾಯನಶಾಸ್ತ್ರ ವಿಭಾಗವನ್ನು ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ