CrimeKannada NewsKarnataka News

*ಕಳ್ಳ ಬಂದ ಕಳ್ಳ: ಗೂಗಲ್ ಮ್ಯಾಪ್ ಸಿಬ್ಬಂದಿಗೆ ಬಿತ್ತು ಗೂಸಾ*

ಪ್ರಗತಿವಾಹಿನಿ ಸುದ್ದಿ : ಗೂಗಲ್ ಮ್ಯಾಪ್ ಕ್ಯಾಮೆರಾ ಅಳವಡಿಸಲಾದ ಕಾರನ್ನು ಕಳ್ಳರ ಕಾರು ಎಂದು ಭಾವಿಸಿ ಗೂಗಲ್ ಮ್ಯಾಪ್ ತಂಡದ ಸದಸ್ಯರನ್ನು ಹಳ್ಳಿಯವರು ಥಳಿಸಿದ್ದಾರೆ. 

 ಉತ್ತರ ಪ್ರದೇಶದ ಘಟಂಪುರ ಎಂಬಲ್ಲಿಯ ಬಿರ್ಹಾರ್ ಔಟ್‌ಪೋಸ್ಟ್ ಪ್ರದೇಶದ ಮಹೋಲಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.‌ ರಾತ್ರಿ ವೇಳೆ ಕ್ಯಾಮೆರಾ ಅಳವಡಿಸಿದ ವಾಹನವನ್ನು ಬಳಸಿಕೊಂಡು ತಂಡವು ಗ್ರಾಮದ ಬೀದಿಗಳನ್ನು ಮ್ಯಾಪಿಂಗ್ ಮಾಡುತ್ತಿದ್ದಾಗ ಗ್ರಾಮಸ್ಥರು ಕಳ್ಳರು ಅಂತ ಭಾವಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಸ್ಥಳೀಯಾಡಳಿತ ಅಥವಾ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಬೀದಿ ಸರ್ವೇ ನಡೆಸಲು ಗೂಗಲ್ ಮ್ಯಾಪ್ ತಂಡವು ಸ್ಥಳಕ್ಕೆ ಆಗಮಿಸಿದೆ. ಮೇಲ್ಗಡೆ ಕ್ಯಾಮರಾ ಹೊಂದಿರುವ ವಾಹನವನ್ನು ಗಮನಿಸಿದ ಜನರು, ಇದು ಕಳ್ಳರ ವಾಹನ ಎಂದು ತಪ್ಪಾಗಿ ಭಾವಿಸಿ ಅದನ್ನು ಅಡ್ಡಗಟ್ಟಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸುವ ಮೊದಲು ಪರಿಸ್ಥಿತಿ ಸ್ವಲ್ಪ ಸಮಯದವರೆಗೆ ವಾಗ್ವಾದಕ್ಕೆ ತಿರುಗಿತ್ತು.

ಗ್ರಾಮಸ್ಥರು ಕಾರನ್ನು ಸುತ್ತುವರಿದು ಗಲಾಟೆ ಮಾಡಿದಾಗ ಸಿಬ್ಬಂದಿ ಭಯದಿಂದ ಪೊಲೀಸ್‌ಗೆ ಕರೆ ಮಾಡಿದ್ದರು, ಸಾದ್ ಪೊಲೀಸರು ಸ್ಥಳಕ್ಕೆ ಬಂದು ಜನರಿಗೆ ತಿಳಿ ಹೇಳಿದರು. ನಂತರ ಕಾರನ್ನು ಕಳುಹಿಸಲಾಯಿತು. 

Home add -Advt

ಗೂಗಲ್‌ನ ಸ್ಟ್ರೀಟ್ ವ್ಯೂ ಮ್ಯಾಪಿಂಗ್ ಕಾರು, 360 ಡಿಗ್ರಿ ಕ್ಯಾಮೆರಾ ಹೊತ್ತು ಹಾದುಹೋದಾಗ ಊರಿಗೆ ಕಳ್ಳರು ಬಂದಿದ್ದಾರೆಂಬ ವದಂತಿ ಹಬ್ಬಿತ್ತು. ಗ್ರಾಮಸ್ಥರು ಸ್ಥಳದಲ್ಲಿ ಸೇರಿಕೊಂಡು ಗದ್ದಲವುಂಟು ಮಾಡಿ ಕಾರನ್ನು ನಿಲ್ಲಿಸಲು ರಸ್ತೆಯ ಮೇಲೆ ಮರದ ದಿಮ್ಮಿಗಳನ್ನು ಹಾಕಿದರು. ಕಾರಿನಲ್ಲಿದ್ದ ಸಿಬ್ಬಂದಿ ಭಯಗೊಂಡು ಪೊಲೀಸರಿಗೆ ಕರೆ ಮಾಡಿದರು. ಪೊಲೀಸರು ಬಂದು ಗ್ರಾಮಸ್ಥರಿಗೆ ವಿವರಿಸಿದ ನಂತರ ಕಾರನ್ನು ಸುರಕ್ಷಿತವಾಗಿ ಕಳುಹಿಸಲಾಗಿದೆ.

ಗ್ರಾಮದಲ್ಲಿ ಇತ್ತೀಚೆಗೆ ಹಲವು ಕಳವು, ದರೋಡೆ ನಡೆದಿರುವ ಕಾರಣ ಗ್ರಾಮಸ್ಥರು ಅಲ್ಲಿ ಓಡಾಡುವ ಎಲ್ಲಾ ವಾಹನಗಳ ಮೇಲೆ ನಿಗಾ ಇಡುತ್ತಿದ್ದಾರೆ. 

Related Articles

Back to top button