
ಪ್ರಗತಿವಾಹಿನಿ ಸುದ್ದಿ: ಕಳ್ಳರು ಕಳ್ಳತನ ಮಾಡುವಾಗ ಜನರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಸರಗುಪ್ಪಿ ಗ್ರಾಮದಲ್ಲಿ ನಡೆದಿದೆ.
ಇಂದು ಬೆಳ್ಳಂಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ಮಸರಗುಪ್ಪಿ ಗ್ರಾಮ ಹೊರವಲಯದ ಬಾವಿ ಒಂದರಲ್ಲಿ ವಾಟರ್ ಪಂಪ್ ಹಾಗೂ ಕೇಬಲ್ ಕಳುವು ಮಾಡುತ್ತಿದ್ದ ನಾಲ್ಕು ಜನ ಖದೀಮರನ್ನ ಗ್ರಾಮಸ್ಥರು ಹಿಡಿಯಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಮೂವರು ಓಡಿಹೋಗಿದ್ದು, ಎರಡು ಬೈಕ್ ಸಮೇತ ಒಬ್ಬ ಕಳ್ಳ ಸಿಕ್ಕಿಬಿದ್ದಿದ್ದಾನೆ. ದುರ್ಗಪ್ಪ ಶಿವಪ್ಪ ಕುಂಚಿಕುರವಿ ಎಂಬ ಖದೀಮನನ್ನ ಸೆರೆ ಹಿಡಿಯಲಾಗಿದೆ.
ಆತನನ್ನ ಗ್ರಾಮಸ್ಥರು ಸೆರೆ ಹಿಡಿದು ವಿಚಾರಣೆ ಮಾಡಿದ್ದಾರೆ. ಬೆಳಗಾವಿ ಮೂಲದ ಇಬ್ಬರು ಹಾಗೂ ಮಹಾರಾಷ್ಟ್ರದ ನೇಸರಗಿ ಮೂಲದ ಮೂವರು ಈ ಕೃತ್ಯದಲ್ಲಿ ಇದ್ದಾರೆ ಎಂದು ಮಾಹಿತಿ ನೀಡಿದ್ದಾನೆ.
ನಾಗಪ್ಪ, ಸುರೇಶ, ಶಿವಪ್ಪ, ಹುಸೇನಿ, ಸೇರಿದಂತೆ ಐದು ಜನ ಕಳ್ಳತನ ಮಾಡುತ್ತಿದ್ದೆವೆ. ಸುಮಾರು ಒಂದು ವರ್ಷದಿಂದ ಇದೆ ಕೆಲಸ ಮಾಡುತ್ತಿದ್ದೇವೆ, ಎಂದು ಸೆರೆ ಸಿಕ್ಕ ದುರ್ಗಪ್ಪ ಶಿವಪ್ಪ ಕುಂಚಿಕುರವಿ ಹೇಳಿದ್ದಾನೆ.
ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಕಳ್ಳನನ್ನ ಅಥಣಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.