Belagavi NewsBelgaum NewsKannada NewsKarnataka News

*ಕಂಗ್ರಾಳ ಗಲ್ಲಿಯಲ್ಲಿ ಸಂಪ್‌ಗೆ ಬಿದ್ದು ಎರಡು ವರ್ಷದ ಮಗು ಸಾವು*

ಪ್ರಗತಿವಾಹಿನಿ ಸುದ್ದಿ: ಮನೆ ಮುಂದೆ ಆಟವಾಡುತ್ತಾ ನೀರಿನ ಸಂಪ್‌ಗೆ ಬಿದ್ದು ಮಗು ಮೃತಪಟ್ಟಿರುವ ಘಟನೆ ಬೆಳಗಾವಿ ನಗರದ ಕಂಗ್ರಾಳ ಗಲ್ಲಿಯಲ್ಲಿ ನಡೆದಿದೆ.

Home add -Advt

ಮೃತ ಮಗುವನ್ನು ಸಾಯೀಶಾ ಸಂದೀಪ್ ಬಡವನಾಚೆ (2) ಎಂದು ಗುರುತಿಸಲಾಗಿದೆ. ಆಟವಾಡುತ್ತಿದ್ದ ಮಗು ಕಣ್ಮರೆಯಾಗಿದ್ದು ಪೋಷಕರು ತೀವ್ರ ಹುಡುಕಾಟ ನಡೆಸಿದ್ದಾರೆ. ಎಷ್ಟೇ ಹುಡುಕಿದರೂ ಮಗು ಕಾಣದಿದ್ದಾಗ ಸಂಪ್ ತೆರೆದು ನೋಡಿದಾಗ ಮಗು ಬಿದ್ದಿರುವುದು ಕಂಡಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ಕರೆತರುವ ಮುನ್ನವೇ ಮಗು ಸಾವಿಗೀಡಾಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button