Kannada NewsKarnataka News
*ನಡು ರಸ್ತೆಯಲ್ಲೆ ಲಾಂಗ್ ಹಿಡಿದು ರಂಪಾಟ ನಡೆಸಿದ ಯುವಕ *

ಪ್ರಗತಿವಾಹಿನಿ ಸುದ್ದಿ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ಹಾಡಹಗಲೇ ನಡು ರಸ್ತೆಯಲ್ಲೇ ಲಾಂಗ್ ಬಿಸಿ ಯುವಕನೋರ್ವ ಹುಚ್ಚಾಟ ಮೇರೆದಿರುವ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕನು ಲಾಂಗ್ ಹಿಡಿದು ಗಾಡಿ ನಿಲ್ಸೋ ನಮ್ಮ ತಮ್ಮನಿಗೆ ಅಪಘಾತವಾಗಿದೆ ಎಂದು ಕೂಗಾಡುತ್ತಾ ರಂಪಾಟ ಮಾಡಿದ್ದಾನೆ. ಬಳಿಕ ಆ ಯುವಕನನ್ನು ಹಿಂಬಾಲಿಸಿದ ಕೆಲ ಸ್ಥಳೀಯ ಯುವಕರ ಗುಂಪೊಂದು, ಅವನ ಕೈಯಲ್ಲಿದ್ದ ಲಾಂಗ್ ಅನ್ನು ಕಿತ್ತುಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ನಂತರ ಲಾಂಗ್ ಅನ್ನು ರಸ್ತೆ ಪಕ್ಕದ ಕೆರೆಯಲ್ಲಿ ಎಸೆದಿದ್ದಾರೆ. ಘಟನೆಯಿಂದ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದು, ಘಟನೆಯ ಸಂಪೂರ್ಣ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಲಾಂಗ್ ಹಿಡಿದು ಹುಚ್ಚಾಟ ಮಾಡಿದ್ದ ಯುವಕನನ್ನು ಸದ್ಯ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.




