ಎಂ.ಕೆ.ಹೆಗಡೆ, ಬೆಳಗಾವಿ – `ಅಣ್ಣನವರೇ, ನಿಮ್ಮ ಸಹೋದರಿ ಕಳಿಸಿರುವ ಈ ರಾಖಿಯನ್ನು ಸ್ವೀಕರಿಸಿ, ನಿಮ್ಮ ಸಹೋದರಿಯ ಕುಟುಂಬದ ರಕ್ಷಣೆಯ ಹೊಣೆ ನಿಮ್ಮ ಹೆಗಲಿಗೆ ಇದೆ. ದಯಮಾಡಿ ಎನ್ ಪಿಎಸ್ ರದ್ದುಮಾಡಿ ಓಪಿಎಸ್ ಜಾರಿಮಾಡಿ. ನಿಮ್ಮ ತಂಗಿಯ ಕುಟುಂಬದ ಭವಿಷ್ಯ ಕಾಪಾಡಿ. ಇದೇ ನೀವು ತಂಗಿಗೆ ನೀಡುವ ದೊಡ್ಡ ಕೊಡುಗೆ’
ಬೆಳಗಾವಿ ಜಿಲ್ಲೆಯ ಶಿಕ್ಷಕಿಯರು ಸೇರಿದಂತ ಸರಕಾರಿ ಮಹಿಳಾ ನೌಕರರ ವಿಶಿಷ್ಠ ಅಭಿಯಾನವಿದು. ರಾಜ್ಯ ಸರಕಾರ 2006ರಿಂದ ಜಾರಿಗೆ ತಂದಿರುವ ಎನ್ ಪಿಎಸ್ ಯೋಜನೆ ವಿರುದ್ಧ ಇನ್ನಿಲ್ಲದ ಹೋರಾಟ ಮಾಡಿರುವ ನೌಕರರು ಇದೀಗ ವಿನೂತನವಾದ ಅಭಿಯಾನವೊಂದನ್ನು ಆರಂಭಿಸಿದ್ದಾರೆ.
ಎನ್ ಪಿಎಸ್ ರದ್ದುಗೊಳಿಸಬೇಕು. ಹಳೆಯ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸಬೇಕು. ತನ್ಮೂಲಕ ನೌಕರರ ಕುಟುಂಬದ ಭವಿಷ್ಯ ಕಾಪಾಡಬೇಕು ಎಂದು ಮಹಿಳೆಯರು ಅಭಿಯಾನ ಶುರುಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯಿಂದ ಈ ಅಭಿಯಾನ ಆರಂಭವಾಗಿದ್ದು ಈಗ ಇಡೀ ರಾಜ್ಯಕ್ಕೆ ವಿಸ್ತರಿಸುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಹಿಳೆಯರು ರಾಖಿ ಕಳಿಸುವ ಮೂಲಕ ತಮ್ಮ ಬೇಡಿಕೆ ಈಡೇರಿಸುವಂತೆ ಅಂಗಲಾಚುತ್ತಿದ್ದಾರೆ.
ಇದರ ಪ್ರತಿಯನ್ನು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಢಕ್ಷರಿ, ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಸ್ವಾಮಿ ಅವರಿಗೂ ಕಳಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಚನ್ನಮ್ಮ ನಾಡಿನ ವೀರ ಎನ್ ಪಿಎಸ್ ವನಿತೆಯರು ಎಂದು ಗ್ರುಪ್ ಮಾಡಿಕೊಂಡು ಈ ಅಭಿಯಾನಕ್ಕೆ ಚಾಲನೆ ನೀಡಿರುವ ಮಹಿಳಾ ನೌಕರರು, ವೇಬಿನಾರ್ ಮೂಲಕ ಚರ್ಚಿಸಿದ್ದಾರೆ.
ರಾಜ್ಯದಲ್ಲಿ ಒಟ್ಟೂ 2.40 ಲಕ್ಷ ಎನ್.ಪಿ.ಎಸ್. ನೌಕರರಿದ್ದಾರೆ. ಅವರಲ್ಲಿ ಲಕ್ಷಕ್ಕೂ ಹೆಚ್ಚು ಮಹಿಳಾ ನೌಕರರಿದ್ದಾರೆ. ಬೆಳಗಾವಿಯಲ್ಲಿಯಲ್ಲಿ 15000ಕ್ಕೂ ಹೆಚ್ಚು ಎನ್ ಪಿಎಸ್ ನೌಕರರಿದ್ದು, 8000ಕ್ಕೂ ಹೆಚ್ಚು ಮಹಿಳೆಯರಿದ್ದಾರೆ.
ಭರವಸೆಗಳೆಲ್ಲ ಹುಸಿ
`ಬೆಳಗಾವಿ ಜಿಲ್ಲೆಯಲ್ಲಿ 3000 ಶಿಕ್ಷಕಿಯರು ಈ ಅಭಿಯಾನ ಆರಂಭಿಸಿದ್ದಾರೆ. ಪುರುಷ ನೌಕರರು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಮಹಿಳೆಯರು ಮನೆಯಲ್ಲಿದ್ದುಕೊಂಡೇ ತಮ್ಮ ಭಾವನೆಯನ್ನು ಹೊರಹಾಕಲು ಈ ಅಭಿಯಾನಮ ಆರಂಭಿಸಲಾಗಿದೆ’ ಎಂದು ಶಿಕ್ಷಕ ಬಿ.ಎನ್.ಮಿಣಕಿ ಹೇಳುತ್ತಾರೆ.
ಒಟ್ಟಾರೆ, ಕಿತ್ತೂರು ಚನ್ನಮ್ಮನ ನಾಡಿನ ವೀರವನಿತೆಯರು ಆರಂಭಿಸಿರುವ ಈ ಭಾವನಾತ್ಮಕ ಅಭಿಯಾನಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸುತ್ತಾರೆಯೋ… ಕಾದು ನೋಡಬೇಕಿದೆ.
ಪ್ರತಿಕ್ರಿಯೆಗಳನ್ನು – [email protected] ಅಥವಾ ವಾಟ್ಸಪ್ – 8197712235 ಗೆ ಕಳಿಸಿ
( ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ, ನಿಮ್ಮ ಪರಿಚಿತರಿಗೆಲ್ಲ ಶೇರ್ ಮಾಡಿ)
ನಿಖರ ಮತ್ತು ನಿರಂತರ ಸುದ್ದಿಗಳಿಗಾಗಿ ಪ್ರಗತಿವಾಹಿನಿ ವಾಟ್ಸಪ್ ಗ್ರುಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ –
https://chat.whatsapp.com/G3wOorjsctX5BYRbTscsGu
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ