
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಂಕಿತ ಡೆಂಗೆ ಜ್ವರದಿಂದ ಬೆಳಗಾವಿಯಲ್ಲಿ ಓರ್ವ ಸಾವಿಗೀಡಾಗಿದ್ದಾರೆ.
ಬೆಳಗಾವಿಯ ಹಿಂಡಲಗಾ ಗ್ರಾಮದ ಲಕ್ಷ್ಮೀ ನಗರದ ಯುವಕ ಪ್ರಸಾದ ಮುಚ್ಚಂಡಿಕರ (28) ಶನಿವಾರ ಜ್ವರದಿಂದ ಮೃತಪಟ್ಟಿದ್ದಾನೆ.
ಪ್ರಸಾದ ಕಳೆದ ಕೆಲದಿನಗಳಿಂದ ಜ್ವರಕ್ಕೆ ತುತ್ತಾಗಿದ್ದರು. ಅವರಿಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಡೆಂಗೆ ಜ್ವರ ಎಂದು ಶಂಕಿಸಲಾಗಿದ್ದು, ಇನ್ನಷ್ಟೆ ಖಚಿತವಾಗಬೇಕಿದೆ.
ಯುವಕನಿಗೆ ಪತ್ನಿ, ಪುತ್ರ, ತಂದೆ ,ಅಜ್ಜಿ ಇದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ