Belagavi NewsBelgaum News

*ಲಗೂನ್ ಬೀಸ್ ನಲ್ಲಿ ನಡೆಯಲಿರುವ ಗಾಳಿಪಟ ಉತ್ಸವದಲ್ಲಿ ಭಾರತ ಪ್ರತಿನಿಧಿಸಲಿದ್ದಾರೆ ಬೆಳಗಾವಿಯ ಸಂದೇಶ್ ಕಡ್ಡಿ*

ಪ್ರಗತಿವಾಹಿನಿ ಸುದ್ದಿ: ಜು.3 ರಿಂದ 6ರವರೆಗೆ ಜಕಾರ್ತಾ- ಇಂಡೋನೇಷಿಯಾದ ಲಗೂನ್ ಬೀಸ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳಲು ಬೆಳಗಾವಿಯ ಸಂದೇಶ ಕಡ್ಡಿ ಭಾರತ ದೇಶದಿಂದ ಪ್ರತಿನಿಧಿಸುತ್ತಿರುವುದು ಜಿಲ್ಲೆಗೆ ಹೆಮ್ಮೆ ತಂದಿದೆ.


ಸಂದೇಶ ಕಡ್ಡಿ ಅವರು ವಿವಿಧ ದೇಶಗಳಲ್ಲಿ ನಡೆದ ಸುಮಾರು 15 ದೇಶದಲ್ಲಿ ಅಂತಾರಾಷ್ಟ್ರೀಯ ಗಾಳಿಪಟದ ಉತ್ಸವದಲ್ಲಿ ಭಾಗಿಯಾಗಿದ್ದಾರೆ.

ಈಗ ನಡೆಯಲಿರುವ ಜಕಾರ್ತಾ- ಇಂಡೋನೇಷಿಯಾದ ಲಗೂನ್ ಬೀಸ್ ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡು ಬೆಳಗಾವಿಯ ಕೀರ್ತಿ ಪತಾಕೆಯನ್ನು ಹಾರಿಸಲಿದ್ದಾರೆ. ಒನ್ ಸ್ಕೈ ಒನ್ ವರ್ಲ್ಡ್ ಪ್ರಚಾರವನ್ನು ಸಂದೇಶ ಮಾಡಲಿದ್ದಾರೆ.

Related Articles

Back to top button