
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ – ನಿಪ್ಪಾಣಿಯಲ್ಲಿ, ನಿರ್ಮಾಣಗೊಂಡಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನಾಳೆ ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಸೋಮವಾರ ಉದ್ಘಾಟಿಸಲಿದ್ದಾರೆ.

ಕ್ಷೇತ್ರದ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ತಮ್ಮ ಗುರಿಯ ಹಾದಿಯಲ್ಲಿ ಮತ್ತೊಂದು ಕನಸು ಸಾಕಾರಗೊಳ್ಳುತ್ತಿದೆ. ಮಕ್ಕಳ ಮತ್ತು ತಾಯಂದಿರ ಶ್ರೇಯೋಭಿವೃದ್ಧಿಗಾಗಿ ಅಹರ್ನಿಶಿ ಶ್ರಮಿಸುತ್ತಿದ್ದು, ಅವರಿಗೆ ಸೇವೆ ನೀಡಲು ಆಸ್ಪತ್ರೆ ಸಿದ್ಧವಾಗಿದೆ. ಉತ್ತಮ ಗುಣಮಟ್ಟದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಿದ್ದು, ತಾಯಿ ಹಾಗೂ ಮಗುವಿನ ಶುಶ್ರೂಷೆಗಾಗಿ ಈ ಆಸ್ಪತ್ರೆಯನ್ನು ಕ್ಷೇತ್ರಕ್ಕೆ ಅರ್ಪಿಸಲಿದ್ದೇವೆ ಎಂದು ಜೊಲ್ಲೆ ದಂಪತಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ