Karnataka News

*ಭಗವಾನ್ ವಿಷ್ಣುವನ್ನೇ ಮದುವೆಯಾದ ಮಹಿಳೆ* !

ಪ್ರಗತಿ ವಾಹಿನಿ ಸುದ್ದಿ, ಜೈಪುರ:

ರಾಜಸ್ಥಾನದ ಜೈಪುರದ ಮಹಿಳೆಯೊಬ್ಬರು ಭಗವಾನ್ ವಿಷ್ಣುವನ್ನೇ ವಿವಾಹವಾದ ವಿಚಿತ್ರ ಪ್ರಸಂಗ ನಡೆದಿದೆ.

Home add -Advt

ಪೂಜಾ ಸಿಂಗ್ ಎಂಬ 30 ವರ್ಷದ ಮಹಿಳೆ ಹೀಗೆ ದೇವರನ್ನೇ ಮದುವೆಯಾದವರು. ಗಂಡ-ಹೆಂಡತಿ ನಡುವೆ ಸಣ್ಣ ಪುಟ್ಟ ಕಾರಣಕ್ಕೂ ಜಗಳವಾಗುವುದನ್ನು ನೋಡುತ್ತ ಬಂದಿದ್ದೇನೆ. ಈ ರೀತಿಯ ಜಗಳದಿಂದ ದಂಪತಿಯ ಜೀವನವೇ ಹಾಳಾಗುತ್ತದೆ. ನನಗೆ ಅಂತಹ ಜಗಳದಿಂದ ಜೀವನ ಹಾಳು ಮಾಡಿಕೊಳ್ಳುವುದು ಇಷ್ಟವಿಲ್ಲದೆ ದೇವರನ್ನೇ ವಿವಾಹವಾಗುತ್ತಿದ್ದೇನೆ ಎಂದು ಪೂಜಾ ಸಿಂಗ್ ತಿಳಿಸಿದ್ದಾರೆ.

ಸಾಮಾನ್ಯ ವಿವಾಹದಲ್ಲಿ ಎಲ್ಲ ಅನುಸರಿಸುವ ಎಲ್ಲ ವಿಧಿ ವಿಧಾನಗಳನ್ನು ಪಾಲಿಸಿ ಶಾಸ್ತ್ರೋಕ್ತವಾಗಿಯೇ ಪೂಜಾ ಸಿಂಗ್ ಭಗವಾನ್ ವಿಷ್ಣು ದೇವರನ್ನು ವಿವಾಹವಾಗಿದ್ದಾರೆ.

ವಿವಾಹದಲ್ಲಿ ಪೂಜಾ ಸಿಂಗ್‍ರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರೂ ಅವರ ತಂದೆ ಪಾಲ್ಗೊಂಡಿರಲಿಲ್ಲ ಎಂದು ತಿಳಿದು ಬಂದಿದೆ.

 

*ಬೆಳಗಾವಿ ಪೊಲೀಸರ ಭರ್ಜರಿ ಭೇಟೆ*

https://pragati.taskdun.com/belagavi-police-arested-324-accused-in-last-1-year/

Related Articles

Back to top button