
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಳೆದ ಮಂಗಳವಾರ ಹೆರಿಗೆಗೆ ದಾಖಲಾಗಿದ್ದ ಮಹಿಳೆ ಹೆರಿಗೆ ಬಳಿಕ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಈ ಮೂಲಕ ಬಾಣಂತಿಯರ ಸಾವಿನ ಪ್ರಕರಣಗಳು ಮುಂದುವರೆದಿದೆ.
ಬೆಳಗಾವಿ ತಾಲೂಕಿನ ತುಮ್ಮರಗುದ್ದಿ ಗ್ರಾಮದ ಬಾಣಂತಿ ಕೀರ್ತಿ ಮೃತ ದುರ್ದೈವಿ. ಮಂಗಳವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅಂದು ಸಾಯಂಕಾಲದವರೆಗೆ ಆರೋಗ್ಯವಾಗಿದ್ದ ಬಾಣಂತಿ ಕೀರ್ತಿಗೆ ತೀರ್ವ ರಕ್ತ ಸ್ರಾವದಿಂದ ಕಳೆದ ಮೂರು ದಿನಗಳಿಂದ ವೆಂಟಿಲೆಟರನಲ್ಲಿ ಇದ್ದಳು. ಆದರೆ ಚಿಕಿತ್ಸೆ ಫಲಿಸದೆ ಗುರುವಾರ ರಾತ್ರಿ ಬಿಮ್ಸ್ ನಲ್ಲಿ ಸಾವನ್ನಪ್ಪಿದ್ದಾಳೆ. ಎಪಿಎಂಸಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.