Kannada NewsLatest

ಮಲಪ್ರಭಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ನೀರುಪಾಲು

ಪ್ರಗತಿವಾಹಿನಿ ಸುದ್ದಿ, ರಾಮದುರ್ಗ: ತಾಲೂಕಿನ ಮಲಪ್ರಭಾ ನದಿಯ ಕೊಳಚಿ ಜಲಾಶಯದಲ್ಲಿ ಸ್ನಾನ ಮಾಡಲು ಹೋಗಿದ್ದ ಯುವಕನೊಬ್ಬ ನೀರುಪಾಲಾಗಿದ್ದಾನೆ.

ಧಾರವಾಡ ತಾಲೂಕಿನ ರಾಯರ ಹೆಬ್ಬಳ್ಳಿ ಗ್ರಾಮದ ಶಂಕರ ಶಿವಯ್ಯ ಮಠಪತಿ (20) ನೀರುಪಾಲಾದವ. ಈತ ರಾಮದುರ್ಗದ ತನ್ನ ಸ್ನೇಹಿತನ ಗೃಹಪ್ರವೇಶ ಕಾರ್ಯಕ್ರಮಕ್ಕೆ  ತನ್ನ ಇಬ್ಬರು ಸ್ನೇಹಿತರೊಂದಿಗೆ ಶನಿವಾರ ಸಂಜೆ ಆಗಮಿಸಿದ್ದ. ಭಾನುವಾರ ಗೃಹಪ್ರವೇಶ ಕಾರ್ಯಕ್ರಮ ಮುಗಿಸಿ  ಕೊಳಚಿ ಡ್ಯಾಮ್ ಗೆ ಸ್ನಾನ ಮಾಡಲು ತೆರಳಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದವ ಮೇಲೆ ಏಳಲಾಗದೆ ಮುಳುಗಿದ ಎಂದು ಆತನ ಸ್ನೇಹಿತರು ತಿಳಿಸಿದ್ದಾರೆ.

ಮೊದಲಿಗೆ ಸ್ನೇಹಿತರಿಬ್ಬರೂ ಹುಟುಕಾಟ ನಡೆಸಿದ್ದಾರೆ. ಪತ್ತೆಯಾಗದ ಕಾರಣ ರಾಮದುರ್ಗದ ಸ್ನೇಹಿತನಿಗೆ ಸುದ್ದಿ ತಿಳಿಸಿದ್ದಾರೆ. ಸ್ನೇಹಿತ ನೀಡಿದ ಮಾಹಿತಿ ಮೇರೆಗೆ ಕೂಡಲೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಆಗಮಿಸಿದ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

ಮಾರ್ಚ್ ನಲ್ಲಿ ಸಿದ್ಧಗೊಳ್ಳಲಿವೆ ದೇಶದ ಮೊದಲ 22 ಸ್ಮಾರ್ಟ್ ಸಿಟಿಗಳು

Home add -Advt

https://pragati.taskdun.com/the-countrys-first-22-smart-cities-will-be-ready-in-march/

*ಹುಲಿ ದಾಳಿಗೆ ಇಬ್ಬರು ದುರ್ಮರಣ*

https://pragati.taskdun.com/tiger-attackkodagutwo-death/

ಬರೀ ಒಂದು ಕ್ಯಾಚ್ ನಲ್ಲಿ ಖ್ಯಾತಿಯನ್ನೇ ಬಾಚಿದ ಬೆಳಗಾವಿ ಯುವಕ

https://pragati.taskdun.com/belgaum-youth-who-rose-to-fame-in-just-one-catch/

Related Articles

Back to top button