ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಜನನಿಬಿಡ ಪ್ರದೇಶದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗುವ ಮೂಲಕ ಯುವಕನೊಬ್ಬ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಇಲ್ಲಿನ ಮೈಕೋ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಅಂಕುಶ್ ಎಂಬಾತನೇ ಪಾಕ್ ಪರ ಘೋಷಣೆ ಕೂಗಿದವ. ಈತ ಇಲ್ಲಿನ ಪಿಜಿಯೊಂದರಲ್ಲಿ ಉಳಿದಿದ್ದ.
ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ವರ ಪ್ರಕಾರ ಆರೋಪಿ ಯುವಕ ಮೊಬೈಲ್ ನಲ್ಲಿ ಫರ್ಜಿ ವೆಬ್ ಸೀರೀಸ್ ನೋಡುತ್ತಿದ್ದ. ಈ ವೇಳೆ ಪಾಕಿಸ್ತಾನ್ ಪರ ಘೋಷಣೆಯನ್ನು ಜೋರಾಗಿ ಹೇಳಿದ್ದಾನೆ. ಇದನ್ನು ಕೇಳಿ ಅಕ್ಕಪಕ್ಕದ ಜನ ಈತ ಯಾರೋ ವಿಧ್ವಂಸಕನೇ ಇರಬೇಕೆಂದುಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಾನಸಿಕವಾಗಿ ಕೊಂಚ ಅಸ್ವಸ್ಥತೆ ಹೊಂದಿದ್ದಾನೆ ಎನ್ನಲಾಗಿದೆ. ಮೊದಲಿಗೆ ಈತನ ವಿಚಾರಣೆ ಕೈಗೊಂಡ ಮೈಕೋ ಲೇಔಟ್ ಪೊಲೀಸ್ ಇನಸ್ಪೆಕ್ಟರ್ ಗಿರೀಶ ಅವರು ಬಿಡುಗಡೆಗೊಳಿಸಿದ್ದರು. ಆದರೆ ನಂತರ ಮತ್ತೆ ಆರೋಪಿಯನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ