Latest

ಆಕಾಶದ ಗುಡ್ಡಕ್ಕೆ ಶಿಶು ಏರಿತಲೇ ಪರಾಕ್ ; ರಾಜ್ಯಕ್ಕೆ ಯುವ ಮುಖ್ಯಮಂತ್ರಿ ಎಂದ ಭವಿಷ್ಯವಾಣಿ?

ಪ್ರಗತಿ ವಾಹಿನಿ ಸುದ್ದಿ; ರಾಣೆಬೆನ್ನೂರು: ರಾಜ್ಯದಲ್ಲಿ ಯುವಕರೊಬ್ಬರು ಮುಖ್ಯಮಂತ್ರಿ ಸ್ಥಾನಕ್ಕೆ ಏರುವ ಭವಿಷ್ಯವನ್ನು ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶ ಮೈಲಾರಲಿಂಗ ಸ್ವಾಮಿಯ ಭವಿಷ್ಯವಾಣಿಯಲ್ಲಿ ನುಡಿಯಲಾಗಿದೆ.

ದಸರಾ ಹಬ್ಬದ ದಿನವಾದ ಬುಧವಾರ ನಾಗಪ್ಪ ಗೊರವಯ್ಯನವರು 21 ಅಡಿ ಬಿಲ್ಲನ್ನು ಏರಿ ಕಾರ್ಣಿಕ ನುಡಿದಿದ್ದಾರೆ.

ಇಂದಿನ ಕಾರ್ಣಿಕದಲ್ಲಿ ನಾಗಪ್ಪ ಗೊರವಯ್ಯನವರು ‘ಆಕಾಶದ ಗುಡ್ಡಕ್ಕೆ ಶಿಶು ಏರಿ ತಲೆ ಪರಾಕ್’ ಎಂದು ನುಡಿದಿದ್ದಾರೆ. ಈ ಐತಿಹಾಸಿಕ ಕಾರ್ಣಿಕದ ನುಡಿಯನ್ನು ಹಲವರು ವಿವಿಧ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ.

ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್ ಎನ್ನುತ್ತಾ ಗೊರವಪ್ಪ ನಾಗಪ್ಪ ಉರ್ಮಿ ಅವರು ನುಡಿದ ಭವಿಷ್ಯ ತೀವ್ರ ಕುತೂಹಲ ಕ್ಕೆ ಕಾರಣವಾಗಿದೆ. ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಮಾಲತೇಶ ಭಟ್ ಅವರು ಸಣ್ಣಸಣ್ಣ ರೈತರಿಗೂ ಉತ್ತಮವಾಗಲಿದೆ. ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಎಂದು ಕಾರ್ಣಿಕವನ್ನು ವಿಶ್ಲೇಷಿಸಿದ್ದಾರೆ. ಉನ್ನತವಾದ ಸ್ಥಾನಕ್ಕೆ ಕಿರಿಯ ವಯಸ್ಸಿನ ವ್ಯಕ್ತಿ ತಲುಪಲಿದ್ದಾರೆ ಎನ್ನುವುದು ಕಾರ್ಣಿಕನುಡಿಯ ಅರ್ಥ ಎಂದು ವಿಶ್ಲೇಷಿಸಲಾಗಿದೆ.

ಕಳೆದ ವರ್ಷ ವ್ಯಾಧಿ ಬೂದಿ ಆತಲೇ, ಸೃಷ್ಟಿ ಸಿರಿಯಾದಿತಲೇ ಪರಾಕ್ ಎನ್ನುವ ಭವಿಷ್ಯವಾಣಿಯನ್ನು ನುಡಿಯಲಾಗಿತ್ತು. ಕಾಯಿಲೆ ಬೂದಿಯಾಗುತ್ತದೆ, ದೇಶದ ಜನತೆ ನೆಮ್ಮದಿಯಿಂದ ಬದುಕುವಂತಹ ವಾತಾವರಣ ನಿರ್ಮಾಣವಾಗುತ್ತದೆ ಎನ್ನುವುದು ಇದರ ಅರ್ಥವಾಗಿತ್ತು. ಕ್ಷೇತ್ರದಲ್ಲಿ ನುಡಿಯಲಾಗುವ ಭವಿಷ್ಯವಾಣಿ ಎಂದೂ ಸುಳ್ಳಾಗುವುದಿಲ್ಲ ಎಂದು ಭಕ್ತರು ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ.

ವಿಜಯದಶಮಿಯ ಮುನ್ನಾದಿನ ಕ್ಷೇತ್ರದಲ್ಲಿ ಗೊರವಯ್ಯ ಕಾರ್ಣಿಕ ನುಡಿಯುವ ಸಂಪ್ರದಾಯವಿದೆ. ಸಹಸ್ರಾರು ಜನರ ಎದುರು ಗೌರವಯ್ಯನವರು ನುಡಿಯುವ ಕಾರ್ಣಿಕ ಇದೀಗ ಕುತೂಹಲ ಹುಟ್ಡಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button