Kannada NewsLatest

ಕಾರ್ಯಕರ್ತನ ಮನೆಯಲ್ಲಿ ಆಪ್ ನಾಯಕನಿಗೆ ಥಳಿತ

ಪ್ರಗತಿವಾಹಿನಿ ಸುದ್ದಿ, ಚಂಡಿಗಡ: ಆಮ್ ಆದ್ಮಿ ಪಾರ್ಟಿಯ ಮುಖಂಡರೊಬ್ಬರಿಗೆ ಕಾರ್ಯಕರ್ತನ ಮನೆಯಲ್ಲೇ ಥಳಿಸಲಾಗಿದೆ.

ಪಂಜಾಬ್‌ನ ಬಟಾಲಾದಲ್ಲಿ ಈ ಘಟನೆ ನಡೆದಿದ್ದು ಈ ಕುರಿತ ವಿಡಿಯೊವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ತ್ರಿಲೋಕ್ ಸಿಂಗ್ ಭಗೋವಾಲಿಯಾ ಥಳಿತಕ್ಕೊಳಗಾದ ಆಪ್ ನಾಯಕ

Home add -Advt

ಆಪ್ ಕಾರ್ಯಕರ್ತ ಸುಖ್ವಿಂದರ್ ಸಿಂಗ್ ಅವರ ಮನೆಯಲ್ಲಿ ತಮ್ಮನ್ನು ಥಳಿಸಲಾಗಿದೆ ಎಂದು ತ್ರಿಲೋಕ್ ಸಿಂಗ್ ಆರೋಪಿಸಿದ್ದಾರೆ. ಘಟನೆಯ ವೀಡಿಯೊವನ್ನು ಕಾಂಗ್ರೆಸ್ ನಾಯಕ ಸುಖಪಾಲ್ ಸಿಂಗ್ ಖೈರಾ ಅವರು ಹಂಚಿಕೊಂಡಿದ್ದಾರೆ.

ಹಲ್ಲೆ ವೇಳೆಗೆ ಭಗೋವಾಲಿಯಾ ಅವರು ಧರಿಸಿದ್ದ ಪೇಟಾವನ್ನು ಬಿಡಿಸಿ ಹಾಕಲಾಗಿದೆ. ಎಫ್‌ಐಆರ್‌ ದಾಖಲಿಸುವ ಪ್ರಕ್ರಿಯೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಕಾರ್ಯಕರ್ತರೊಬ್ಬರ ದೆಹಲಿಯ ಮನೆಯಲ್ಲಿ ಆಪ್ ಶಾಸಕ ಗುಲಾಬ್ ಸಿಂಗ್ ಯಾದವ ಅವರನ್ನು ಥಳಿಸಿದ ಘಟನೆ ನಡೆದಿತ್ತು.

Related Articles

Back to top button