
ಪ್ರಗತಿವಾಹಿನಿ ಸುದ್ದಿ: ಸೆಲ್ಫಿಗಾಗಿ ಪೋಸ್ ನೀದಲು ಹೋಗಿ ಅಬ್ಬಿ ಜಲಪಾತದಲ್ಲಿ ಬಿದ್ದು, ಯುವಕ ನೀರುಪಾಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಯಡೂರು ಬಳಿ ನಡೆದಿದೆ.
ಬೆಂಗಳೂರು ಮೂಲದ ಪ್ರವಾಸಿಗ 26 ವರ್ಷದ ವಿನೋದ್ ನೀರುಪಾಲಾಗಿರುವ ಯುವಕ. ಅಬ್ಬಿ ಜಲಪಾತ ನೋಡಲೆಂದು 12 ಜನ ಯುವಕರು ತೆರಳಿದ್ದರು. ಈ ವೇಳೆ ಸೆಲ್ಫಿ ಕ್ಲಿಕ್ಕಿಸುವಾಗ ಅಚಾನಕ್ ಆಗಿ ಕಾಲು ಜಾರಿ ಯುವಕ ವಿನೋದ್ ಜಲಪಾತಕ್ಕೆ ಬಿದ್ದು ಮೃತಪಟ್ಟಿದ್ದಾನೆ.
ಸೆಲ್ಫಿ ಕ್ರೇಜಿಗೆ ಯುವಕನೊಬ್ಬ ಬಲಿಯಾಗಿದ್ದು, ಸ್ಥಳಕ್ಕೆ ಪೊಲಿಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ