Belagavi NewsBelgaum NewsPolitics

*ಸಿ.ಟಿ ರವಿ ಕೇಸ್ ನಲ್ಲಿ ರಾಜ್ಯ ಬಿಜೆಪಿ ನಾಯಕತ್ವ ವಿಫಲವಾಗಿದೆ: ಶಾಸಕ ಅಭಯ್ ಪಾಟೀಲ್ ಅಸಮಾಧಾನ*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆಗೆ ಸ್ವಪಕ್ಷದ ನಾಯಕರೇ ಒತಾಯಿಸುತ್ತಾರೆ. ಒಂದೆಡೆ ಬಣ ಬಡಿದಾಟ, ಮತ್ತೊಂದೆಡೆ ನಾಯಕತ್ವದ ಬಗ್ಗೆ ಅಸಮಾಧಾನ ಆರಂಭವಾಗಿದೆ. ಈ ನಡುವೆ ಶಾಸಕ ಅಭಯ್ ಪಾಟೀಲ್, ಸಿ.ಟಿ ರವಿ ಪ್ರಕರಣದಲ್ಲಿ ರಾಜ್ಯ ಬಿಜೆಪಿ ನಾಯಕತ್ವ ವಿಫಲವಾಗಿದೆ ಎಂದು ನೇರವಾಗಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅಭಯ್ ಪಾಟೀಲ್, ಸಿ.ಟಿ.ರವಿಗೆ ಟಾರ್ಚರ್ ಕೊಟ್ಟರೂ ರಾಜ್ಯ ನಾಯಕರು ಗಂಭೀರವಾಗಿ ಪರಿಗಣಿಸಿಲ್ಲ. ಹಿರಿಯ ಶಾಸಕರನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಇದರಿಂದಾಗಿ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಶಾಸಕರಿಗೆ ಈ ರೀತಿ ಪರಿಸ್ಥಿತಿಯಾದರೆ ಇನ್ನು ಕಾರ್ಯಕರ್ತರ ಸ್ಥಿತಿ ಏನಾಗಬೇಕು? ಇನ್ನಾದರೂ ಪಕ್ಷದ ನಾಯಕರು ಎಚ್ಚೆತ್ತು ಹೋರಾಟ ಮಾಡಬೇಕು ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button