Kannada NewsKarnataka News

ಲಾಡ್ಜ್ ಮೇಲೆ ದಾಳಿ: ಅಬಾರ್ಷನ್, ಲೈಂಗಿಕ ಆಸಕ್ತಿ ವೃದ್ಧಿಸುವ ಮಾತ್ರೆಗಳ ದಾಸ್ತಾನು ಪತ್ತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

ಬೆಳಗಾವಿ ಜಿಲ್ಲೆಯ ಔಷಧ ನಿಯಂತ್ರಣಾಧಿಕಾರಿಗಳನ್ನೊಳಗೊಂಡ ತಂಡವು ಖಚಿತ ಮಾಹಿತಿ ಆಧರಿಸಿ  ಆಝಾದ್ ಗಲ್ಲಿ, ಕರ್ನಾಟಕ ಚೌಕ್, ರವಿವಾರ ಪೇಟ್‌ನ ಅಮರ ಪ್ಯಾಲೇಸ್ ಲಾಡ್ಜ್  ಮೇಲೆ ದಾಳಿ ಮಾಡಿದ್ದು, ಅಲ್ಲಿನ ಕೊಠಡಿ ಸಂಖ್ಯೆ ೧೦೪ ರಲ್ಲಿ ಕೃಷ್ಣಮೂರ್ತಿ ಧರೇಗೌಡರ ಎಂಬ ಹುಬ್ಬಳ್ಳಿ ಮೂಲದ ವ್ಯಕ್ತಿಯು ಹಲವು ಔಷಧಗಳಾದ ಅಬಾರ್ಷನ್ ಮಾತ್ರೆ, ಲೈಂಗಿಕ ಆಸಕ್ತಿ ವೃದ್ಧಿಸುವ ಮಾತ್ರೆಗಳು, ಸ್ಪ್ರೆಗಳನ್ನು ಅನಧಿಕೃತವಾಗಿ ಮಾರಾಟ ಮಾಡಲೆಂದು ದಾಸ್ತಾನಿಸಿರುವುದು ಪತ್ತೆಯಾಗಿದ್ದು, ಔಷಧಗಳನ್ನು ಹಾಗೂ ದಾಖಲಾತಿಗಳನ್ನು   ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಔಷಧಗಳಲ್ಲಿ ಡಿಕೆಟಿ ಸಂಸ್ಥೆಯಎ ಕೇರ್ ಔಷಧವು  ಮೈಫ್ರಿಸ್ಟಾನ್ ನತ್ತು ಮಿಸಾಪ್ರೋಸ್ಟಲ್ ಎಂಬ ಸಂಯೋಜನೆ ಇದ್ದು, ಅನುಸೂಚಿ ಹೆಚ್ ಔಷಧವಾಗಿದ್ದು, ಇದನ್ನು ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಅವಶ್ಯಕ ರೋಗಿಗೆ, ರಕ್ತ ವರ್ಗಾವಣೆ ಸೌಲಭ್ಯವಿರುವ ಆಸ್ಪತ್ರೆಗಳಲ್ಲಿ ಮಾತ್ರ ನೀಡುವುದಾಗಿರುತ್ತದೆ.

ಆದರೆ ಈ ಔಷಧವು ಅಬಾರ್ಷನ್ ಮಾತ್ರೆ ಎಂದು ದುರುಪಯೋಗವಾಗುವುದಲ್ಲದೇ ನಕಲಿ ವೈದ್ಯರುಗಳು ಈ ಔಷಧವನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಖರೀದಿಸಿ ಅನಧೀಕೃತ ಗರ್ಭಪಾತಕ್ಕೆ ಉಪಯೋಗಿಸುತ್ತಿರುವುದು   ತಿಳಿದು ಬಂದಿದೆ ಎಂದು ಉನ್ನತ ಮೂಲಗಳು ಪ್ರಗತಿವಾಹಿನಿಗೆ ತಿಳಿಸಿವೆ.
ಕೃಷ್ಣಮೂರ್ತಿ ಧರೇಗೌಡರ  ಬೆಳಗಾವಿಯ ಸಮೃದ್ಧಿ ಫಾರ್ಮಾ ಹಾಗೂ ಶ್ರೇಯಾ ಮೆಡಿಕಲ್ ಹೆಸರಿನ ನಕಲಿ ಮೊಹರುಗಳನ್ನು ಹಾಗೂ ಬಿಲ್ಲುಗಳನ್ನು ಉಪಯೋಗಿಸಿ ಅನಧೀಕೃತ ಔಷಧ ಮಾರಾಟದಲ್ಲಿ ತೊಡಗಿರುವುದು  ತಿಳಿದು ಬಂದಿದೆ. ಔಷಧ ಹಾಗೂ ಇತರೆ ದಾಖಲಾತಿಗಳನ್ನು ಅಧಿಕಾರಿಗಳ ಸ್ವಾಧೀನದಲ್ಲಿಟ್ಟುಕೊಳ್ಳಲು ಬೆಳಗಾವಿಯ  ೨ನೇ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.

ಮಾರ್ಕೆಟ್ ಠಾಣೆ ಪೊಲೀಸರು ದಾಳಿಗೆ ಬಂದೋಬಸ್ತ್ ಒದಗಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button