
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಸಭಾಷ ಸುರೇಂದ್ರ ಉಪ್ಪಾರ ಅವರ ಮೇಲೆ ಎಸಿಬಿ ದಾಳಿ ನಡೆದಿದೆ. ಹಲವಾರು ಆಸ್ತಿ, ಠೇವಣಿ ಪತ್ತೆಯಾಗಿದೆ.
ರುಕ್ಮಿಣಿ ನಗರದಲ್ಲಿರುವ 2720 ಚದರ್ ಅಡಿ ಜಾಗದಲ್ಲಿ ಡುಪ್ಲೆಕ್ಸ್ ಬಂಗ್ಲೆ, ಕುಮಾರ ಸ್ವಾಮಿ ಲೇ ಔಟ್ ನಲ್ಲಿ ಒಂದು ಪ್ಲಾಟ್, ವಿವಿಧ ಬ್ಯಾಂಕ್ ಗಳಲ್ಲಿ 51.51 ಲಕ್ಷ ರೂ. ಠವಣಿ, 5 ಲಕ್ಷ ರೂ. ವಿಮೆ ಹೂಡಿಕೆ, 337 ಗ್ರಾಂ ಬಂಗಾರ, 1511 ಗ್ರಾಂ ಬೆಳ್ಳಿ ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ.
ಅವರಿಗೆ ಸಂಬಂಧಿಸಿದ 4 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದ್ದು, ಹೆಚ್ಚಿನ ತಪಾಸಣೆ ಮುಂದುವರಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ