Kannada NewsLatest
ಬೆಳಗಾವಿಯಲ್ಲಿ 3, ರಾಜ್ಯದಲ್ಲಿ 317 ಜನರಲ್ಲಿ ಕೊರೊನಾ ಸೋಂಕು ಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸೋಂಕಿಗೆ ರಾಜ್ಯ ತತ್ತರಗೊಳ್ಳುತ್ತಿದ್ದು, ಇಂದು 317 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ ಕರ್ನಾಟಕದಲ್ಲಿ 7530ಕ್ಕೆ ಏರಿಕೆಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ 79, ಕಲಬುರಗಿ 63, ಬಳ್ಳಾರಿ 53, ಬೆಂಗಳೂರು ನಗರ 45, ಶಿವಮೊಗ್ಗ 7, ಯಾದಗಿರಿ 6, ಧಾರವಾಡ 8, ಉಡುಪಿ 7, ಉತ್ತರ ಕನ್ನಡ 6, ಹಾಸನ 4, ಚಿಕ್ಕಮಗಳೂರು 4, ಕೊಪ್ಪಳ 4, ಬೆಳಗಾವಿ 3, ಬೀದರ್ 2, ತುಮಕೂರು 2 ಕೇಸ್ ಪತ್ತೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌದಿ ಅರೇಬಿಯಾದಿಂದ ಬಂದ 75 ಜನರಲ್ಲಿ ಇಂದು ಕೊವಿಡ್ ಪಾಸಿಟೀವ್ ಪತ್ತೆಯಾಗಿದೆ.




