![](https://pragativahini.com/wp-content/uploads/2025/02/arvind-kejriwal.jpg)
ಪ್ರಗತಿವಾಹಿನಿ ಸುದ್ದಿ: 27 ವರ್ಷಗಳ ಬಳಿಕ ದೆಹಲಿ ಚುಕ್ಕಾಣೆಯನ್ನು ಬಿಜೆಪಿ ಹಿಡಿದಿದೆ. ಚುನಾವಣೆ ಮುಂಚೆ ಬಿಜೆಪಿ ವಿರುದ್ಧ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು, ಎಎಪಿ ಅಭ್ಯರ್ಥಿಗಳಿಗೆ ಹಣದ ಆಮಿಷ ನೀಡಿ ತನ್ನತ್ತ ಸೆಳೆಯಲು ಬಿಜೆಪಿ ನಾಯಕರು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದರು.
ಈ ಆರೋಪಕ್ಕೆ ನಿಮ್ಮ ಬಳಿ ಇರುವ ಪುರಾವೆಗಳನ್ನು ನೀಡುವಂತೆ ಕೋರಿ ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳವು ಕೇಜ್ರಿವಾಲ್‌ಗೆ ಲೀಗಲ್ ನೋಟಿಸ್ ನೀಡಿದೆ. ದೆಹಲಿಯ ವಿಧಾನ ಸಭಾಚುನಾವಣೆಗೆ ಮತದಾನ ನಡೆಯುವ ಒಂದು ದಿನ ಮೊದಲೇ ಈ ನೋಟಿಸ್ ಅನ್ನು ಕೇಜ್ರಿವಾಲ್‌ಗೆ ನೀಡಲಾಗಿದೆ. ಸದ್ಯ ಈ ವಿಷಯ ಎಎಪಿ ಹಾಗೂ ಬಿಜೆಪಿ ನಡುವಿನ ರಾಜಕೀಯ ತಿಕ್ಕಾಟಕ್ಕೆ ಮತ್ತಷ್ಟು ಇಂಬು ಕೊಟ್ಟಂತಾಗಿದೆ.
ಕೇಜ್ರಿವಾಲ್ ಏನು ಹೇಳಿದ್ದಾರೆ ಎಂದು ನೋಡುವದಾದರೆ, ಬಿಜೆಪಿ ನಾಯಕರು ಅಧಿಕಾರಕ್ಕಾಗಿ ಎಎಪಿ ಅಭ್ಯರ್ಥಿಗಳನ್ನು ಸೆಳೆಯುತ್ತಿದ್ದಾರೆ. 16 ಅಭ್ಯರ್ಥಿಗಳಿಗೆ ತಲಾ 15 ಕೋಟಿ ಹಾಗೂ ಸಚಿವ ಸ್ಥಾನದ ಆಮಿಷ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ