Kannada NewsKarnataka NewsLatest

ಬೆಳಗಾವಿ ಸ್ಮಾರ್ಟ್ ಸಿಟಿ ಅಧಿಕಾರಿ ಎಸಿಬಿ ಬಲೆಗೆ; ಮನೆಯಲ್ಲೂ ದುಡ್ಡಿನ ರಾಶಿ

ಸಿದ್ದನಾಯ್ಕ್ ಮನೆಯನ್ನು ಶೋಧ ನಡೆಸಿದಾಗ 23.56 ಲಕ್ಷ ರೂ. ಪತ್ತೆಯಾಗಿದೆ.

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಿಲ್ ಪಾಸ್ ಮಾಡಲು 60 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಬೆಳಗಾವಿ ಸ್ಮಾರ್ಟ್ ಸಿಟಿ ಟೆಕ್ನಿಕಲ್ ಮ್ಯಾನೇಜರ್ ಸಿದ್ದನಾಯ್ಕ್  ದೊಡ್ಡಬಸಪ್ಪ ನಾಯ್ಕರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆಯಿಂದ ಬೆಳಗಾವಿ ನಗರದಲ್ಲಿ ನಿರ್ಮಿಸಲಾಗುತ್ತಿರುವ ಬಸ್ ನಿಲ್ದಾಣದ ಕಾಮಗಾರಿಯ ಬಿಲ್ ಪಾಸ್ ಮಾಡಲು ಶೇ.0.5ರಷ್ಟು ಅಂದರೆ, 60 ಸಾವಿರ ರೂ. ಲಂಚ ಕೇಳಿದ್ದರು. 60 ಸಾವಿರ ರೂಗಳನ್ನು ತಮ್ಮ ಮನೆಯಲ್ಲಿ ಸ್ವೀಕರಿಸುತ್ತಿದ್ದಾಗ ಗುರುವಾರ ಸಂಜೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಅಪೂರ್ವಾ ಕನ್ಸ್ಟ್ರಕ್ಷನ್ ಜನರಲ್ ಮ್ಯಾನೇಜರ್ ಬೆಳಗಾವಿ ಗಣೇಶ ನಗರದ  ಸಂಜೀವ ಕುಮಾರ ನವಲಗುಂದ ದೂರು ಸಲ್ಲಿಸಿದ್ದರು. ಅವರು ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಸಿಟಿ ಬಸ್ ನಿಲ್ದಾಣ ನಿರ್ಮಾಣ ಮಾಡುತ್ತಿದ್ದಾರೆ. ಇದರ ಬಿಲ್ ಮಂಜೂರು ಮಾಡಲು ಸಿದ್ದನಾಯ್ಕ್ ಲಂಚ ಕೇಳಿದ್ದರು.

 

ಸಿದ್ದನಾಯ್ಕ್ ಮನೆಯನ್ನು ಶೋಧ ನಡೆಸಿದಾಗ 23.56 ಲಕ್ಷ ರೂ. ಪತ್ತೆಯಾಗಿದೆ.
ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.
 ಎಸ್ಪಿ ಬಿಎಸ್ ನ್ಯಾಮಗೌಡ,  ಮಾರ್ಗದರ್ಶನದಲ್ಲಿ ಜೆ.ಎಮ್.ಕರುಣಾಕರ ಶೆಟ್ಟಿ ಪೊಲೀಸ್ ಉಪಾಧೀಕ್ಷಕರು ಪ್ರಕರಣ ದಾಖಲಿಸಿಕೊಂಡಿದ್ದಾರೆ.   ಎಯ.ಎಸ್ ಗುದಿಗೊಪ್ಪ, ಮೊಲೀಸ್ ಇನ್ಸ್ ಪೆಕ್ಟರ್, ಹಾಗೂ  ಹೆಚ್ ಸುನೀಲ್ ಕುಮಾರ, ಪೊಲೀಸ್ ಇನ್ಸ್‌ಪೆಕ್ಟರ್, ಮತ್ತು ಬೆಳಗಾವಿ ಎಸಿಬಿ ಸಿಬ್ಬಂದಿ ಭಾಗವಹಿಸಿದ್ದರು.
  

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button