
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೇಂದ್ರ ಕಚೇರಿ ಸೇರಿದಂತೆ ಹಲವು ಪಾಲಿಕೆ ಕಚೇರಿಗಳ ಮೇಲೆ ಇಂದು ಕೂಡ ಎಸಿಬಿ ಅಧಿಕಾರಿಗಳು ದಾಳಿ ಮುಂದುವರೆಸಿದ್ದಾರೆ.
ಯಲಹಂಕ, ಬೊಮ್ಮನಹಳ್ಳಿ, ಮಹದೇವಪುರ ಸೇರಿದಂತೆ ಹಲವು ಕಚೇರಿಗಳಲ್ಲಿ ಎಸಿಬಿ ಅಧಿಕಾರಿಗಳ 10 ತಂಡಗಳಿಂದ ದಾಳಿ ನಡೆಸಲಾಗುತ್ತಿದ್ದು, ಕಂದಾಯ, ಇಂಜಿನಿಯರಿಂಗ್, ಟಿಡಿಆರ್ ವಿಭಾಗಕ್ಕೆ ಸಂಬಂಧಿಸಿದ ಕಡತಗಳ ಶೋಧ ನಡೆಸಲಿದ್ದಾರೆ.
ಟೆಂಡರ್, ಟಿಡಿಆರ್,ರಾಜಕಾಲುವೆ, ಕೆರೆಗಗಳು, ಕಟ್ಟಡಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿಯಿಂದ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದ್ದು, ಇನ್ನೂ ಮೂರು ದಿನಗಳ ಕಾಲ ಕಚೇರಿಗಳ ಮೇಲೆ ನಿರಂತರ ಎಸಿಬಿ ದಾಳಿ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.
ಕಳೆದ ಶುಕ್ರವಾರ ಬಿಬಿಎಂಪಿಯ ಕೇಂದ್ರ ಕಚೇರಿ ಸೇರಿ 25ಕ್ಕೂ ಹೆಚ್ಚು ಕಚೇರಿಗಳ ಮೇಲೆ 200 ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದರು.
ಟಿವಿ ಟವರ್ ಮೇಲೆ ಬಾಂಬ್ ದಾಳಿ; 5 ಜನ ಸಾವು; ಚಾನಲ್ ಗಳು ಸಂಪೂರ್ಣ ಸ್ಥಗಿತ