Latest

ಶಿಕ್ಷಕರ ವರ್ಗಾವಣೆ: ಲಂಚ ಪಡೆಯಲು ಹೋಗಿ ಎಸಿಬಿ ಬಲೆಗೆ ಬಿದ್ದ ಬಿಇಒ ಆಫೀಸ್ ಮ್ಯಾನೇಜರ್

ಪ್ರಗತಿವಾಹಿನಿ ಸುದ್ದಿ; ಹಾವೇರಿ: ಶಿಕ್ಷಕರ ವರ್ಗಾವಣೆಗಾಗಿ ಲಂಚದ ಬೇಡಿಕೆ ಇಟ್ಟಿದ್ದ ಬಿಇಒ ಕಚೇರಿ ಮ್ಯಾನೇಜರ್ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಶಿಗ್ಗಾವಿಯಲ್ಲಿ ನಡೆದಿದೆ.

ಬಿಇಒ ಕಚೇರಿ ಮ್ಯಾನೇಜರ್ ಸುರೇಶ್ ಗಿರಪ್ಪ ರೊಡ್ಡಣ್ಣವರ ಎಸಿಬಿ ಬಲೆಗೆ ಬಿದ್ದ ಮ್ಯಾನೇಜರ್. ವರ್ಗಾವಣೆಗಾಗಿ ಗಾಂಧಿನಗರ ಶಾಲೆಯ ಶಿಕ್ಷಕ ಹನುಮಂತ ಹಳ್ಳೆಪ್ಪನವರ ಎಂಬುವವರಿಗೆ ಸುರೇಶ್ 4 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಶಿಕ್ಷಕರು ದಾವಣಗೆರೆ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.

ಒಂದು ಸಾವಿರ ರೂಪಾಯಿ ಹಣವನ್ನು ಸುರೇಶ್ ಮುಂಗಡವಾಗಿ ಪಡೆದುಕೊಂಡಿದ್ದ. ಬಾಕಿ 3 ಸಾವಿರ ಹಣ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಐಧಿಕಾರಿಗಳು ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿ ಬಲೆಗೆ ಕೆಡವಿದ್ದಾರೆ.
ಹೊಸ ಮುಖ್ಯಮಂತ್ರಿಗೆ ಆನಂದ ಮಾಮನಿ ಎಚ್ಚರಿಕೆ

Home add -Advt

Related Articles

Back to top button