
ಪ್ರಗತಿವಾಹಿನಿ ಸುದ್ದಿ: ಕೆಟ್ಟುನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಡಾನ್ಸರ್ ಸುಧೀಂದ್ರ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಸ್ತೆಬದಿ ಕಾರು ಕೆಟ್ಟುನಿಂತಿತ್ತು. ಈ ವೇಳೆ ಸುಧೀಂದ್ರ ಕಾರನ್ನು ಪರಿಶೀಲಿಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿಹೊಡೆದಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಖ್ಯಾತ ಡಾನ್ಸರ್ ಆಗಿದ್ದ ಸುಧೀಂದ್ರ ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ದಾಬಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
					
				
					
					
					
					
					
					
					

