Kannada NewsNational

ರಥೋತ್ಸವದ ವೇಳೆ ಅವಘಡ: 13 ವಿದ್ಯಾರ್ಥಿಗಳಿಗೆ ತಗುಲಿದ ಕರೆಂಟ್ ಶಾಕ್

ಪ್ರಗತಿವಾಹಿನಿ ಸುದ್ದಿ : ಯುಗಾದಿ ಹಬ್ಬ ತೆಲಗು ಕ್ಯಾಲೆಂಡರ್ ನಲ್ಲಿ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಇದನ್ನು ಚೈತ್ರ ನವರಾತ್ರಿಯ ಮೊದಲ ದಿನದಂದು ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದ ಜನರು ಆಚರಿಸುತ್ತಾರೆ. ಆದರೆ ಹೊಸ ವರ್ಷದ ಆರಂಭದ ಸಂಭ್ರಮಾಚರಣೆ ಮಾಡುತ್ತಿದ್ದವರಿಗೆ ಶಾಕ್ ಎದುರಾಗಿದೆ.

ಯುಗಾದಿ ದಿನದಂದು ದೊಡ್ಡ ದುರಂತ ಸ್ವಲ್ಪ ಅಂತರದಿಂದ ಮಿಸ್ ಆಗಿದೆ.‌ ರಥೋತ್ಸವದ ವೇಳೆ ವಿದ್ಯುತ್ ಅವಘಡ ಸಂಭವಿಸಿದ್ದು, 13 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. 

ಯುಗಾದಿ ರಥೋತ್ಸವದ ವೇಳೆ 13 ವಿದ್ಯಾರ್ಥಿಗಳು ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆರವಣಿಗೆ ಭಾಗವಾದ ರಥವು ಹೈವೋಲ್ಟೇಜ್ ವಿದ್ಯುತ್ ತಂತಿಗೆ ತಗುಲಿ ಕನಿಷ್ಠ 13 ಮಕ್ಕಳು ಗಾಯಗೊಂಡಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ತೇಕೂರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

Home add -Advt

Related Articles

Back to top button