
ಪ್ರಗತಿವಾಹಿನಿ ಸುದ್ದಿ, ಗೋಕಾಕ : ಮೂಡಲಗಿ ತಾಲೂಕಿನ ಅರಭಾಂವಿ ಹತ್ತಿರ ಟ್ರ್ಯಾಕ್ಸ್ (Tracks) ಒಂದು ಓವರ್ ಟೇಕ್ (Overtake) ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ರಾತ್ರಿ (Night) 8 ಗಂಟೆಯ ಸುಮಾರಿಗೆ ನಡೆದಿದೆ.
ಸುಕ್ಷೇತ್ರ ಸವದತ್ತಿ ರೇಣುಕಾ-ಯಲ್ಲಮ್ಮದೇವಿಯ ದರ್ಶನ ಪಡೆದು ಭಕ್ತಾಧಿಗಳು ತಮ್ಮ ಸ್ವಂತ ಊರಾದ ಹುಕ್ಕೇರಿ (Hukkeri) ತಾಲೂಕಿನ ಬೆಲ್ಲದ-ಬಾಗೇವಾಡಿಗೆ ಬರುತ್ತಿರಬೇಕಾದರೆ ಈ ಅವಘಡ ಸಂಭವಿಸಿದೆ.
ಟ್ರ್ಯಾಕ್ಸ್ ವಾಹನ ಚಾಲಕ (Driver) ಅರಭಾಂವಿ ಹತ್ತಿರ ಓವರ್ ಟೇಕ್ ಮಾಡುವಾಗ ಎದುರಿಗೆ ಅಡತಡೆಯಾದ ಹಿನ್ನಲೆಯಲ್ಲಿ ವಾಹನ ಆತನ ನಿಯಂತ್ರಣ (Out of control) ತಪ್ಪಿ ರಸ್ತೆಯ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ.