
ಪ್ರಗತಿವಾಹಿನಿ ಸುದ್ದಿ: ಹಬ್ಬದ ಸಂದರ್ಭದಲ್ಲಿಯೇ ಸಾಲು ಸಾಲು ಅಪಘಾತ ಪ್ರಕರಣ ನಡೆದಿದೆ. ಎರಡು ಬೈಕ್ ಗಳ ನಡಿವೆ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಸಾಯಿ ಡಾಬಾ ಬಳಿ ಈ ಘಟನೆ ನಡೆದಿದೆ. ಹೋಂಡಾ ಆಕ್ಟೀವಾ ಹಾಗೂ ಇನ್ನೊಂದು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಹೋಂಡಾ ಆಕ್ಟೀವಾದಲ್ಲಿದ್ದ ಇಬ್ಬರು ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಮುತ್ತುರಾಜ್ (36), ವೆಂಕಟಧನಶೆಟ್ಟಿ (64) ಹಾಗೂ ವಿಷ್ಣು (28) ಮೃತ ದುರ್ವೈವಿಗಳು. ಶಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.