Latest

ಆಂಬ್ಯುಲೆನ್ಸ್ ವಿಳಂಬ; ಅಪಘಾತದ ಗಾಯಾಳು ಜೆಸಿಬಿಯಲ್ಲಿ ಆಸ್ಪತ್ರೆಗೆ ಸಾಗಾಟ

ಪ್ರಗತಿವಾಹಿನಿ ಸುದ್ದಿ, ಭೋಪಾಲ್: ಆಂಬ್ಯುಲೆನ್ಸ್ ವಿಳಂಬದಿಂದಾಗಿ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡ ವ್ಯಕ್ತಿಯೊಬ್ಬರನ್ನು ಜೆಸಿಬಿಯಲ್ಲಿ ಆಸ್ಪತ್ರೆಗೆ ಸಾಗಿಸುತ್ತಿರುವ ವಿಡಿಯೊವೊಂದು ಜಾಲತಾಣದಲ್ಲಿ ಹರಿದಾಡುತ್ತಿದ್ದು ನೆಟ್ಟಿಗರ ಮನ ಕಲುಕಿದೆ.

ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಕಟ್ನಿಯಲ್ಲಿ. ವ್ಯಕ್ತಿಯೊಬ್ಬರು ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರು. ಸ್ಥಳದಲ್ಲಿದ್ದ ಜನ ಆಂಬ್ಯುಲೆನ್ಸ್ ಗೆ ದೂರವಾಣಿಯಲ್ಲಿ ಕರೆ ಮಾಡಿದ್ದರೂ ಆಂಬ್ಯುಲೆನ್ಸ್ ಸಕಾಲಕ್ಕೆ ಬರಲೇ ಇಲ್ಲ.

ಈ ವೇಳೆ ಸ್ಥಳದಲ್ಲಿದ್ದ ಜನ ಆಟೊದವರಿಗೆ ವಿನಂತಿಸಿದ್ದರೂ ಯಾವುದೇ ಆಟೋ ಚಾಲಕರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಒಪ್ಪಲಿಲ್ಲ ಎನ್ನಲಾಗಿದೆ.

ಗಾಯಾಳುವನ್ನು ಬದುಕಿಸುವ ಸಲುವಾಗಿ ಸಾರ್ವಜನಿಕರು ಅಲ್ಲೇ ಇದ್ದ ಜೆಸಿಬಿ ಒಂದನ್ನು ಬಳಸಿ ಅದರ ಬಕೆಟ್ ನಲ್ಲಿ  ಮಲಗಿಸಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಈ ದೃಶ್ಯವನ್ನು ಟ್ವಿಟ್ಟರ್ ಬಳಕೆದಾರರೊಬ್ಬರು ಜಾಲತಾಣದಲ್ಲಿ ಹಂಚಿಕೊಂಡ ನಂತರ ಅನೇಕ ಜನ ಇದಕ್ಕಾಗಿ ಮರುಗಿದ್ದಾರೆ.

Home add -Advt

ಸಚಿನ್ ತೆಂಡೂಲ್ಕರ್ ಬ್ಯಾಟ್ ಕ್ಲೀನಿಂಗ್ ತಂತ್ರಕ್ಕೆ ನೆಟ್ಟಿಗರ ಟ್ರೋಲ್

Related Articles

Back to top button