
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಡಿಎಂಕೆ ಶಾಸಕನ ಪುತ್ರ ಸೇರಿದಂತೆ 7 ಜನರು ಮೃತಪಟ್ಟಿದ್ದು, ಅಪಘಾತ ಪ್ರಕರಣ ತನಿಖೆಗೆ ಮುಂದಾದ ಪೊಲೀಸರಿಗೆ ಹಲವು ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ನಿನ್ನೆ ಮಧ್ಯರಾತ್ರಿ 1:30ರ ಸುಮಾರಿಗೆ ಸಂಭವಿಸಿದ ಭೀಕರ ಅಪಘಾತ ಪ್ರಕರಣ ಸಂಬಂಧ ತನಿಖೆ ಚುರುಕುಗೊಂಡಿದ್ದು, ಕರುಣಾ ಸಾಗರ್, ಇಬ್ಬರು ಯುವತಿಯರು ಹಾಗೂ ಸ್ನೇಹಿತರ ಗುಂಪು ಅಪಘಾತಕ್ಕೂ ಮುನ್ನ ಭರ್ಜರಿ ಪಾರ್ಟಿ, ಮಧ್ಯಸೇವನೆ ಮಾಡಿದ್ದರು ಎನ್ನಲಾಗಿದೆ. ಇದೊಂದು ಹೈಪ್ರೊಫೈಲ್ ಕೇಸ್ ಆಗಿದ್ದು, ಪಾರ್ಟಿ ಮುಗಿಸಿ ಎಲ್ಲರೂ ಎಲ್ಲಿಗೆ ಹೊರಟಿದ್ದರು ಎಂಬುದು ಇನ್ನಷ್ಟು ತಿಳಿಯಬೇಕಿದೆ.
ಆದರೆ ಈ ಅಪಘಾತ ಪ್ರಕರಣ ತನಿಖೆ ವೇಳೆ ಇದೇ ಸ್ನೇಹಿತರ ಗುಂಪು ಇನ್ನೆರಡು ಅಪಘಾತ ಮಾಡಿರುವ ಬಗ್ಗೆ ಸ್ಫೋಟಕ ಮಾಹಿತಿ ಬಯಲಾಗಿದೆ. ಸೋನಿ ವರ್ಲ್ಡ್ ಸಿಗ್ನಲ್ ಬಳಿ ಜೊಮ್ಯಾಟೋ ಡೆಲಿವರಿ ಬಾಯ್ ಗೆ ಕಾರು ಗುದ್ದಿರುವ ಸಾಧ್ಯತೆ ದಟ್ಟಾಗಿದ್ದು, ಈ ಅಪಘಾತ ನೋಡಿ ಕಾರು ತಡೆಯಲು ಮುಂದಾದ ಪೊಲೀಸರ ಮೇಲೆ ಜಿಗ್ ಜ್ಯಾಗ್ ರೀತಿಯಲ್ಲಿ ರೈಡ್ ಮಾಡಿ ಕಾರು ಹತ್ತಿಸಲು ಯತ್ನ ನಡೆಸಿದ್ದರು ಎನ್ನಲಾಗಿದೆ.
ಶಾಸಕರ ಪುತ್ರ ಸೇರಿ 7 ಜನರ ಭೀಕರ ಸಾವು: ಮೊದಲೇ ಎಚ್ಚರಿಸಿದ್ದ ಪೊಲೀಸರು