Kannada NewsKarnataka News

ಬಿಜೆಪಿ ಅಭ್ಯರ್ಥಿ ಮಗನ ಹುಟ್ಟುಹಬ್ಬಕ್ಕೆ ಜೈ `ಮಹಾರಾಷ್ಟ್ರ’ ಶುಭಾಷಯ!

https://youtube.com/shorts/Jy0K9Fh2wGk?feature=share

Home add -Advt

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  – ಇಲ್ಲಿಯ ಮಹಾನಗರ ಪಾಲಿಕೆ ಚುನಾವಣೆಯ ವಾರ್ಡ್ ನಂ.33ರ ಬಿಜೆಪಿ ಅಭ್ಯರ್ಥಿ ರೇಷ್ಮಾ ಪ್ರವೀಣ ಪಾಟೀಲ ಅವರ ಪುತ್ರ ಆದಿತ್ಯ ಪಾಟೀಲ ಹುಟ್ಟು ಹಬ್ಬದ ಶುಭಾಷಯದಲ್ಲಿ ಜೈ ಮಹಾರಾಷ್ಟ್ರ ಎಂದು ಬರೆಯಲಾಗಿದ್ದು, ಇದು ಈಗ ಭಾರಿ ವೈರಲ್ ಆಗಿದೆ.

ಇಂದು ಆದಿತ್ಯ ಪಾಟೀಲ ಅವರ ಹುಟ್ಟುಹಬ್ಬ. ಇದಕ್ಕೆ ಶುಭಾಷಯ ಕೋರುವ ಜಾಹಿರಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಶುಭಾಷಯದ ಆರಂಭದಲ್ಲೇ ಜೈ ಮಹಾರಾಷ್ಟ್ರ ಎಂದು ಉಲ್ಲೇಖಿಸಲಾಗಿದೆ.

ಈ ಬಗ್ಗೆ ಸ್ಪಷ್ಟೀಕರಣ ವಿಡೀಯೋ ಬಿಡುಗಡೆ ಮಾಡಿರುವ ಆದಿತ್ಯ ಪಾಟೀಲ, ಯಾರಿಗಾದರೂ ಮನಸ್ಸಿಗೆ ನೋವಾದರೆ ಕ್ಷಮೆ ಕೇಳುವುದಾಗಿ ತಿಳಿಸಿದ್ದಾರೆ. ಅದರಲ್ಲಿ ಜೈ ಹಿಂದೂ ರಾಷ್ಟ್ರ ಎಂದು ಉಲ್ಲೇಖಿಸಿದ್ದಾರೆ.

ಆದರೆ ಚುನಾವಣೆಗೆ 2 ದಿನ ಇರುವ ಈ ಸಂದರ್ಭದಲ್ಲಿ ಈ ವಿಡೀಯೋ ಎಲ್ಲೆಡೆ ಹರಿದಾಡುತ್ತಿದೆ. ಬಿಜೆಪಿಗೂ ತೀವ್ರ ಮುಜುಗರವನ್ನುಂಟು ಮಾಡಿದೆ.

 

ಮಿಡ್ ನೈಟ್ ಪಾರ್ಟಿ, ಭೀಕರ ಅಪಘಾತ; ಜಿಗ್ ಜ್ಯಾಗ್ ರೈಡ್ ಮಾಡಿ ಪೊಲೀಸರ ಮೇಲೆ ಕಾರು ಹತ್ತಿಸಲು ಯತ್ನ

Related Articles

Back to top button