ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಲೋಂಡಾ ರೈಲು ನಿಲ್ದಾಣದ ಬಳಿ ಸಧ್ಯ ಪ್ರಗತಿಯಲ್ಲಿರುವ
ಮೀರಜ್-ಲೋಂಡಾ ರೈಲು ಮಾರ್ಗ ಅಭಿವೃದ್ಧಿ ಕಾಮಗಾರಿ ಸಂದರ್ಭದಲ್ಲಿ ರೈಲು ಮಾರ್ಗದ ಪಕ್ಕದ
ಅರಣ್ಯ ಪ್ರದೇಶಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಗುರುವಾರ ಸಂಭವಿಸಿದೆ.
ರೈಲ್ವೆ ಇಲಾಖೆಯ ಸಿಬ್ಬಂದಿ ಮತ್ತು ಸ್ಥಳೀಯರ ಸಮಯಪ್ರಜ್ಞೆಯಿಂದ ಬೆಂಕಿಯನ್ನು
ನಿಯಂತ್ರಿಸಲಾಗಿದ್ದು, ಈ ಕುರಿತು ಲೋಂಡಾ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ
ದಾಖಲಾಗಿದೆ.
ಪ್ರಕರಣದ ವಿವರ: ಲೋಂಡಾ ರೈಲು ನಿಲ್ದಾಣದ ಬಳಿ ಲೋಂಡಾ ಗ್ರಾಮದಿಂದ ರೈಲ್ವೆ ಮಾರ್ಗದ
ಮತ್ತೊಂದು ಬದಿಗೆ ತೆರಳಲು ರೈಲ್ವೆ ಇಲಾಖೆ ಸೇತುವೆಯನ್ನು ನಿರ್ಮಾಣ ಮಾಡುತ್ತಿದೆ. ಈ
ಕಾಮಗಾರಿಯ ಗುತ್ತಿಗೆದಾರರು ನಿಮರ್ಾಣ ಹಂತದ ಸೇತುವೆಗೆ ಕಬ್ಬಿಣದ ರಾಡ್ಗಳನ್ನು
ಅಳವಡಿಸಲು ವೆಲ್ಡಿಂಗ್ ಯಂತ್ರಗಳನ್ನು ಸೇತುವೆ ಕಾಮಗಾರಿ ಬಳಿ ತಂದಿದ್ದರು, ಕಾಮರ್ಿಕರು
ಈ ಯಂತ್ರ ಬಳಸಿ ಕಾಮಗಾರಿ ಕೈಗೊಂಡಿತ್ತಿದ್ದರು. ಗುರುವಾರ ಮಧ್ಯಾಹ್ನ ಕಾಮರ್ಿಕರು
ಕಬ್ಬಿಣದ ರಾಡ್ಗಳಿಗೆ ವೆಲ್ಡಿಂಗ್ ಮಾಡುವ ಸಂದರ್ಭದಲ್ಲಿ ಕಾಮಗಾರಿ ಕೈಗೊಂಡ ಸ್ಥಳದಿಂದ
ಬೆಂಕಿಯ ಕಿಡಿಗಳು ಹಾರಿ ಪಕ್ಕದ ಅರಣ್ಯ ಪ್ರದೇಶದಲ್ಲಿ ಬಿದ್ದಿವೆ. ಈ ಸಂದರ್ಭದಲ್ಲಿ
ಗಾಳಿಯೂ ಜೋರಾಗಿ ಬೀಸುತ್ತಿದ್ದ ಕಾರಣ ಕ್ಷಣಾರ್ಧದಲ್ಲೇ ಬೆಂಕಿ ರೈಲು ಹಳಿಗಳ ಪಕ್ಕದ
ಅರಣ್ಯ ಪ್ರದೇಶಕ್ಕೆ ವ್ಯಾಪಿಸತೊಡಗಿದೆ.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಕಾರ್ಮಿಕರು ಅಕ್ಕಪಕ್ಕದ ಜನರನ್ನು ಮತ್ತು
ರೈಲ್ವೆ ಸಿಬ್ಬಂದಿಯನ್ನು ಸಹಾಯಕ್ಕಾಗಿ ಕೂಗಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿದ
ಸ್ಥಳೀಯರು, ರೈಲ್ವೆ ಇಲಾಖೆಯವರು ಮತ್ತು ಕಾಮರ್ಿಕರು ಸ್ಥಳದಲ್ಲಿದ್ದ ಜೆಸಿಬಿ ಯಂತ್ರದ
ಸಹಾಯದಿಂದ ಬೆಂಕಿ ಹತ್ತಿದ ಸ್ಥಳದ ಸುತ್ತಮುತ್ತ ಕಂದಕವನ್ನು ನಿರ್ಮಿಸಿ ಬೆಂಕಿ
ಅರಣ್ಯದೊಳಗೆ ವ್ಯಾಪಿಸುವುದನ್ನು ತಡೆದಿದ್ದಾರೆ. ಬಳಿಕ ಬೆಂಕಿಯನ್ನು ನಂದಿಸಿ ಮುಂದೆ
ಸಂಭವಿಸಬಹುದಾದ ದೊಡ್ಡ ಬೆಂಕಿ ಅನಾಹುತವನ್ನು ತಡೆದಿದ್ದಾರೆ. ಅಷ್ಟರಲ್ಲಾಗಲೇ 20ಕ್ಕೂ
ಹೆಚ್ಚು ಗಿಡಗಳು ಬೆಂಕಿಯಿಂದ ಸುಟ್ಟು ಕರಕಲಾಗಿವೆ ಎಂದು ಮೂಲಗಳು ತಿಳಿಸಿವೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆಯವರು, ರೈಲ್ವೆ ಪೊಲೀಸರು ಮತ್ತು ಲೋಂಡಾ
ಹೊರಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಲೋಂಡಾ
ನಿಲ್ದಾಣದ ರೈಲ್ವೆ ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಸಹಕರಿಸಿದವರಿಗೆ ಧನ್ಯವಾದ ತಿಳಿಸಿದ್ದಾರೆ.
https://pragati.taskdun.com/gokak-businessman-found-dead/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ