Kannada NewsKarnataka NewsLatest
*ಮಗಳನ್ನು ಫ್ಲೈಟ್ ಹತ್ತಿಸಿ ಊರಿಗೆ ವಾಪಸ್ ಆಗುವಾಗ ಅಪಘಾತ; ಇಬ್ಬರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ಮಗಳನ್ನು ದುಬೈಗೆ ಕಳುಹಿಸಿ ಏರ್ ಪೋರ್ಟ್ ನಿಂದ ಊರಿಗೆ ವಾಪಸ್ ಆಗುತ್ತಿದ್ದ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಿಳೆ ಸೇರಿ ಇಬ್ಬರು ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ಹೊರವಲಯದಲ್ಲಿ ನಡೆದಿದೆ.
ಜಯಂತಿ (50) ಹಾಗೂ ವಿಠಲ್ (47) ಮೃತ ದುರ್ದೈವಿಗಳು. ಮೃತರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಹುಲೇಕಲ್ ಗ್ರಾಮದವರು.
ಮಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈ ವಿಮಾನಕ್ಕೆ ಹತ್ತಿಸಿ ಬೆಂಗಳೂರಿನಿಂದ ಊರಿಗೆ ಕಾರಿನಲ್ಲಿ ವಾಪಸ್ ಆಗುತ್ತಿದ್ದರು. ಈ ವೇಳೆ ನಿದ್ದೆ ಮಂಪರಿನಲ್ಲಿದ್ದ ಕಾರು ಚಾಲಕನಿಗೆ ಕಾರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ.
ಕಾರು ಚಾಲಕ ವಿಠಲ್ ಹಾಗೂ ಮಹಿಳೆ ಜಯಂತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




