ಪ್ರಗತಿವಾಹಿನಿ ಸುದ್ದಿ; ಥಾಣೆ: ವಿಚಾರಣಾಧೀನ ಖೈದಿಯೊಬ್ಬ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ದತ್ತಾತ್ರೇಯ ವಾರ್ಕೇ ಮೃತಪಟ್ಟ ಕೈದಿ.
2013ರಲ್ಲಿ ದತ್ತಾತ್ರೇಯ ಮಹಿಳೆಯೊಬ್ಬರಿಗೆ ಮನೆ ಕೊಡಿಸುವುದಾಗಿ ನಂಬಿಸಿ 5 ಲಕ್ಷ ರೂ. ಪಡೆದು ಮನೆ ಕೊಡಿಸದೆ ವಂಚಿಸಿದ್ದ. ಈತನ ವಿರುದ್ಧ ಮಹಿಳೆ ಕಳೆದ ಫೆ.5ರಂದು ಭುಸ್ವಾಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಆರೋಪಿ ದತ್ತಾತ್ರೇಯನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶ ಮಾಡಿತ್ತು. ಬಳಿಕ ಥಾಣೆಯ ಮನ್ಪಾಡಾ ಪೊಲೀಸ್ ಸ್ಟೇಶನ್‌ನಲ್ಲಿ ಬಂಧನದಲ್ಲಿ ಇಡಲಾಗಿತ್ತು.
ದತ್ತಾತ್ರೇಯನಿಗೆ ಕೋವಿಡ್ ಸೋಂಕು ತಗುಲಿದ್ದರಿಂದ ಆತನನ್ನು ಸೆಲ್‌ನಲ್ಲೇ ಐಸೋಲೇಶನ್ ಮಾಡಲಾಗಿತ್ತು. ಭಾನುವಾರ ಬೆಳಗ್ಗೆ ದತ್ತಾತ್ರೇಯ ಇದ್ದಕ್ಕಿದ್ದಂತೆ ಸೆಲ್‌ನ ಒಳಗೇ ಕುಸಿದುಬಿದ್ದಿದ್ದಾನೆ. ತಕ್ಷಣ ಆತನನ್ನು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತಾದರೂ ದತ್ತಾತ್ರೇಯ ಮೃತಪಟ್ಟಿದ್ದಾನೆ.
ದತ್ತಾತ್ರೇಯನ ಸಾವಿನ ಕುರಿತು ತನಿಖೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಮಾಡಿದ್ದಾರೆ.
ರಷ್ಯಾ ಕ್ಷಿಪಣಿ ದಾಳಿಗೆ ರಾಜ್ಯದ ವಿದ್ಯಾರ್ಥಿ ಬಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ