Belagavi NewsBelgaum NewsCrimeKannada NewsKarnataka NewsNational
*ಬೆಳಗಾವಿ ಲವ್-ಸೆಕ್ಸ್-ದೋಖಾ ಪ್ರಕರಣ: ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಪ್ರೇಯಸಿ ಮೇಲೆ ನಿರಂತರ ಅತ್ಯಾಚಾರ ಮಾಡಿದ್ದಲ್ಲದೇ ಯುವತಿ ಬಳಿ ಇದ್ದ ಹಣ, ಚಿನ್ನ ಲಪಟಾಯಿಸಿರುವ ಆರೋಪಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಯುವತಿಗೆ ಮೋಸ ಮಾಡಿದ್ದ ಈಶ್ವರಸಿಂಗ್ ಬಡಗೂಜರ್ ಬಂಧಿತ ಆರೋಪಿ. ಸಂತ್ರಸ್ತೆ ನೀಡಿದ ದೂರು ಆಧರಿಸಿ ಆರೋಪಿಯನ್ನು ಬೆಳಗಾವಿ ಶಹಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇನ್ಸ್ಟಾಗ್ರಾಂಮ್ ನಲ್ಲಿ ಯುವತಿ ಪರಿಚಯ ಮಾಡಿಕೊಂಡಿದ್ದ ಈಶ್ವರಸಿಂಗ್, ಬಳಿಕ ಮದುವೆ ಆಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರಗೈದಿದ್ದ. ಯುವತಿ ಬಳಿ ಇದ್ದ ಹಣ ಬಂಗಾರ ಲಪಟಾಯಿಸಿ ಮದುವೆ ಮಾಡಿಕೊಳ್ಳಲು ಮತ್ತೇ ಮೂರು ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ಸಂತ್ರಸ್ತ ಯುವತಿ ದೂರು ನೀಡಿದ್ದಳು.
ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗುತ್ತಿದ್ದಂತೆ ಆರೋಪಿಯನ್ನು ಬಂಧಿಸಲು ಹಿಂಡೇಟು ಹಾಕಿದ ಪೊಲೀಸರು ಇದೀಗ ಕೊನೆಗೂ ಬಂಧಿಸಿ ಬೆಳಗಾವಿ ನ್ಯಾಯಾಲಕ್ಕೆ ಹಾಜರುಪಡಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.



