Kannada NewsKarnataka NewsLatestNationalPolitics

*ಕೇರಳ ಮೂಲದ ಶರಣ್ಯ ಪತ್ತೆ: ತಾಯಿಯ ಮನವಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಂದನೆ*

ಪ್ರಗತಿವಾಹಿನಿ ಸುದ್ದಿ: ಕೊಡಗಿನ ತಡಿಯಂಡಮೊಳ್ ಅರಣ್ಯದಲ್ಲಿ ಚಾರಣ ಮಾಡುವಾಗ ನಾಪತ್ತೆಯಾಗಿದ್ದ ಕೇರಳ ಮೂಲದ ಶರಣ್ಯ ಅವರ ತಾಯಿಯ ಮನವಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಂದಿಸಿದ್ದು, ಈಕೆಯ ಪತ್ತೆಯಾಗಾಗಿ ನಡೆಯುತ್ತಿದ್ದ ಕಾರ್ಯಾಚರಣೆ ತೀವ್ರಗೊಳಿಸುವಂತೆ ರಾಜ್ಯದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ನಂತರ ಶರಣ್ಯ ಅವರನ್ನು ಭಾನುವಾರ ಸಂಜೆ ಪತ್ತೆ ಮಾಡಲಾಗಿದೆ.

ಸಧ್ಯ ಕೇರಳ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ನಿರತರಾಗಿರುವ ಡಿ.ಕೆ. ಶಿವಕುಮಾರ್ ಅವರನ್ನು ಶರಣ್ಯ ಅವರ ತಾಯಿ ಒರ್ಕಟ್ಟೇರಿಯಲ್ಲಿ ನಡೆಯುತ್ತಿದ್ದ ಚುನಾವಣಾ ಪ್ರಚಾರದ ವೇಳೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಮಗಳ ನಾಪತ್ತೆ ವಿಚಾರವನ್ನು ತಿಳಿಸಿದರು. ವೇದಿಕೆಯಿಂದಲೇ ರಾಜ್ಯದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಕಾರ್ಯಾಚರಣೆ ಮಾಹಿತಿ ಪಡೆದ ಶಿವಕುಮಾರ್ ಅವರು, ಕಾರ್ಯಾಚರಣೆ ತೀವ್ರಗೊಳಿಸುವಂತೆ ಸೂಚನೆ ನೀಡಿದರು.

Home add -Advt

ಶರಣ್ಯ ಪತ್ತೆ ಮಾಡಿದ ಅಧಿಕಾರಿಗಳು, ಬುಡಕಟ್ಟು ಜನರಿಗೆ ಡಿಸಿಎಂ ಅಭಿನಂದನೆ

ಶರಣ್ಯ ಪತ್ತೆಯಾಗಿರುವ ವಿಚಾರವಾಗಿ ತಿರುವನಂತಪುರದಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಅವರು ಮಾತನಾಡಿದ್ದು, “ಕಳೆದ ಎರಡು ದಿನಗಳಿಂದ ಕೇರಳಂನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದೇನೆ. ನಿನ್ನೆ ಮಧ್ಯಾಹ್ನ ಪ್ರಚಾರ ಮಾಡುವಾಗ ಕೊಡಗಿನ ಅರಣ್ಯದಲ್ಲಿ ಟ್ರೆಕಿಂಗ್ ಗೆ ತೆರಳಿ ನಾಪತ್ತೆಯಾಗಿದ್ದ ಶರಣ್ಯ ಅವರ ತಾಯಿ ನನ್ನನ್ನು ಭೇಟಿ ಮಾಡಿ ಆಕೆಯ ಪತ್ತೆಗೆ ಮನವಿ ಸಲ್ಲಿಸಿದ್ದರು. ನಾನು ತಕ್ಷಣವೇ ವೇದಿಕೆಯಲ್ಲೇ ನಮ್ಮ ರಾಜ್ಯದ ಅಧಿಕಾರಿಗಳು ಹಾಗೂ ಬುಡಕಟ್ಟು ನಾಯಕರನ್ನು ಸಂಪರ್ಕ ಮಾಡಿದೆ. ನಿನ್ನೆ ಬೆಳಗ್ಗೆ ಕೂಡ ಮಾಧ್ಯಮ ಸ್ನೇಹಿತರು ಈ ವಿಚಾರವಾಗಿ ನನಗೆ ಪ್ರಶ್ನೆ ಮಾಡಿದ್ದರು. ದೇವರ ನಾಡಿನಲ್ಲಿ ನಾನಿದ್ದು, ಅಯ್ಯಪ್ಪಸ್ವಾಮಿ ಹಾಗೂ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ನಮ್ಮ ಅರಣ್ಯ ಅಧಿಕಾರಿಗಳು, ಪೊಲೀಸರು ಹಾಗೂ ಬುಡಕಟ್ಟು ಜನರು ಸೇರಿ ಸುಮಾರು 170ಕ್ಕೂ ಜನರ ತಂಡ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿ, ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡಿದ್ದ ಶರಣ್ಯ ಅವರನ್ನು ಪತ್ತೆ ಮಾಡಿದ್ದಾರೆ. ಒಂದು ದಿನ ಧಾರಾಕಾರ ಮಳೆಯ ನಡುವೆ ಊಟವಿಲ್ಲದೆ, ಕೇವಲ ನೀರು ಸೇವಿಸುತ್ತಾ ಕಾಲ ಕಳೆದಿದ್ದಾರೆ. ಕಾಡಿ‌ನಲ್ಲಿ ಸಿಲುಕಿದ್ದ ಈ ಹುಡುಗಿ ಬಹಳ ಧೈರ್ಯವಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ. ನಿನ್ನೆ ಸಂಜೆಯೇ ಈಕೆಯ ಪತ್ತೆಯಾದ ಸುದ್ದಿ ಬಂದಿದ್ದು, ಈ ವಿಚಾರವನ್ನು ಬಹಳ ಸಂತೋಷದಿಂದ ಹಂಚಿಕೊಳ್ಳುತ್ತಿರುವೆ. ಈಕೆಯ ಪತ್ತೆಗೆ ಸಹಕರಿಸಿದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.

Related Articles

Back to top button