Latest

*ನಡುರಸ್ತೆಯಲ್ಲೇ ರಂಪಾಟ: ಎಎಸ್ ಐ ಮೇಲೆ ಹಲ್ಲೆ; ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ವಿಚಾರಣೆಗೆ ಕರೆತರುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಎಎಸ್ ಐ ಮೇಲೆಯೇ ನಡುರಸ್ತೆಯಲ್ಲಿ ಹಲ್ಲೆ ನಡೆಸಿ ರಂಪಾಟ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.

ನಾಗಮಂಗಲ ಗ್ರಾಮಾಂತರ ಎಎಸ್ಐ ರಾಜು ಮಜ್ಜನ ಕೊಪ್ಪಲು ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ. ಪೂಜಾರಿ ಕೃಷ್ಣ ಎಂಬಾತನ ವಿರುದ್ಧ ಆತನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹಣ ನೀಡುವಂತೆ ಪ್ರತಿದಿನ ಹಿಂಸಿಸುತ್ತಿರುವುದಾಗಿ ದೂರಿದ್ದರು.

ಈ ಹಿನ್ನೆಲೆಯಲ್ಲಿ ಕೃಷ್ಣನನ್ನು ವಿಚಾರಣೆಗೆಂದು ಕರೆತರಲು ಎಎಸ್ ಐ ರಾಜು ತೆರಳಿದ್ದರು. ಆತ ನಾಗಮಂಗಲದ ಕೋರ್ಟ್ ಬಳಿ ನಿಂತಿದ್ದ ಎಎಸ್ಐ ರಾಜು ಠಾಣೆಗೆ ಬರುವಂತೆ ಕರೆದಿದ್ದಾರೆ. ಠಾಣೆಗೆ ಬರಲು ಆತ ಒಪ್ಪಿಲ್ಲ. ಈ ವೇಳೆ ಆರೋಪಿ ಕೃಷ್ಣನ ಕಾಲರ್ ಹಿಡಿದು ಬಲವಂತವಾಗಿ ಆಟೋಗೆ ಹತ್ತಿಸಲು ಯತ್ನಿಸಿದ್ದಾರೆ. ಈ ವೇಳೆ ಎಎಸ್ ಐಯನ್ನು ಕೃಷ್ಣ ತಳ್ಳಿದ್ದಾನೆ. ತಳ್ಳುತ್ತಿದ್ದಂತೆ ಎಎಸ್ಐ ಕೆಳಗೆ ಬಿದ್ದಿದ್ದಾರೆ. ಬಳಿಕ ಆರೋಪಿ ಕೃಷ್ಣನನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button