Latest

*ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಟ ಚೇತನ್ ವಿರುದ್ಧ ಕ್ರಮದ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಾಗುತ್ತಿರುವ ನಟ ಚೇತನ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮ ಕೈಗೊಳ್ಳಲು ಮುಂದಾಗಿದೆ.

ನಟ ಚೇತನ್ ಅಂಬರೀಶ್ ಸ್ಮಾರಕ ನಿರ್ಮಾಣ ವಿಚಾರವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ಚೇತನ್ ವಿರುದ್ಧ ಅಸಮಾಧಾನಗೊಂಡಿದೆ. ಚಿತ್ರ ಕುಟುಂಬದಲ್ಲಿದ್ದುಕೊಂಡು ಚಿತ್ರರಂಗಕ್ಕೆ ಮುಜುಗರವನ್ನುಂಟುಮಾಡುವ ಹೇಳಿಕೆಗಳನ್ನು ನಟ ಚೇತನ್ ನೀಡುತ್ತಿದ್ದು, ಅವರ ವಿರುದ್ಧ ಅಸಹಕಾರ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಬಾ.ಮಾ.ಹರೀಶ್ ತಿಳಿಸಿದ್ದಾರೆ.

ಹಿರಿಯ ನಟ ಅಂಬರೀಶ್ ಅವರ ಸ್ಮಾರಕವನ್ನು ಮಾರ್ಚ್ 27 ರಂದು ಉದ್ಘಾಟನೆ ಮಾಡಲಾಗಿತ್ತು. ಅಲ್ಲದೇ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡಲಾಗಿತ್ತು. ಈ ಬಗ್ಗೆ ನಟ ಚೇತನ್ ಆಕ್ಷೇಪಾರ್ಹ ಹೇಳಿಕೆ ನೀಡಿ ಸರ್ಕಾರಕ್ಕೆ ತಮ್ಮದೇ ಮನವಿ ಸಲ್ಲಿಸಿದ್ದರು. ಸ್ಮಾರಕ ನಿರ್ಮಾಣವಾಗಲಿ, ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಟ್ಟಿದ್ದಾಗಲಿ ಸಂಸದೆ ಸುಮಲತಾ ಅಂಬರೀಶ್ ಅವರ ಆಶಯವಲ್ಲ, ಇದು ಚಿತ್ರರಂಗದವರ ನಿರ್ಧಾರವಾಗಿತ್ತು. ನಟ ಚೇತನ್ ಪದೇ ಪದೇ ಚಿತ್ರರಂಗದ ಒಕ್ಕೋರಲ ಅಭಿಪ್ರಾಯದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಗಾಗಿ ಅವರಿಗೆ ತಿಳಿ ಹೇಳಲು ಯತ್ನಿಸಲಾಗುವುದು. ಆದರೂ ಹೀಗೆ ಮುಂದುವರೆದರೆ ಕನ್ನಡ ಚಿತ್ರರಂಗದಿಂದ ಅಸಹಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Home add -Advt
https://pragati.taskdun.com/prahlad-joshisiddaramaiahbelagavividhanasabha-election/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button