
https://www.youtube.com/watch?v=ru01DtPPMR4
ಪ್ರಗತಿವಾಹಿನಿ ಸುದ್ದಿ, ಕಂಚಿಪುರಂ – ನವೆಂಬರ್ 14ರಿಂದ 16 ರ ವರೆಗೆ ಮೂರು ದಿನಗಳ ಕಾಲ ತಮಿಳುನಾಡಿನ ಕಂಚಿಪುರಂ ಜಿಲ್ಲೆಯ ತೊಂಡೈಮಂಡಲದಲ್ಲಿ ದಕ್ಷಿಣ ಭಾರತ ರಾಜ್ಯಗಳ ಬಿಜೆಪಿ ರಾಷ್ಟ್ರೀಯ ಕಿಸಾನ್ ಮೋರ್ಚಾ ರಾಷ್ಟ್ರ ಮಟ್ಟದ ಕಾರ್ಯಾಗಾರ ನಡೆಯುತ್ತಿದೆ.
ಕರ್ನಾಟಕದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಬಿಜೆಪಿ ಕಿಸಾನ್ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷರ ಶಂಕರಗೌಡ ಪಾಟೀಲ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದಾರೆ.

ಭೂಮಿ ತಾಯಿ ರೈತರಿಗೆ ಎಂದಿಗೂ ವಿಷ ಉಣಿಸುವುದಿಲ್ಲ ನಮಗೆ ಅನ್ನವನ್ನೆ ನೀಡುತ್ತಾಳೆ ಆದರೆ ನಾವೆ ವಾಣಿಜ್ಯ ಬೆಳೆಗಳನ್ನು ಬೆಳೆದರೆ ಇಳುವರಿ ಹೆಚ್ಚು ಬರುವುದೆಂದು ಈ ಮೂಲಕ ಹೆಚ್ಚು ಹಣ ಗಳಿಸುವ ಆಸೆಯಿಂದ ಭೂಮಿ ತಾಯಿಯ ಒಡಲಿಗೆ ವಿಷ ಸೇರಿಸಿ ಬಂಜೆತನ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಕಿಸಾನ್ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಗನಾಕರ ರಾವ್, ರಾಷ್ಟ್ರೀಯ ಕಿಸಾನ್ ಖಜಾಂಚಿ ಸುಧೀರ್ ತ್ಯಾಗಿ, ಶಂಭು ಕುಮಾರ್, ರಾಷ್ಟ್ರೀಯ ಕಿಸಾನ್ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮೋಹನ್ ಮಾಸ್ಟರ್, ರಾಷ್ಟ್ರೀಯ ಕಿಸಾನ್ ಮೋರ್ಚಾ ಕಾರ್ಯದರ್ಶಿ ರವಿಚಂದ್ರನ್, ರಾಷ್ಟ್ರೀಯ ಕಿಸಾನ್ ಮೋರ್ಚಾ ಕಾರ್ಯದರ್ಶಿ ತಮಿಳುನಾಡಿನ ಕಿಸಾನ್ ಮೋರ್ಚಾ ಅಧ್ಯಕ್ಷ ವಿಜಯ ರಾಘವನ್, ಕರ್ನಾಟಕ ರಾಜ್ಯ ರೈತ ಮೋರ್ಚಾ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು,
ದಕ್ಷಿಣ ಭಾರತದ ವಿವಿಧ ರಾಜ್ಯಗಳ ಪದಾಧಿಕಾರಿಗಳು ಮತ್ತು ಜಿಲ್ಲಾ ಅಧ್ಯಕ್ಷರು, ಬಿಜೆಯ ಕಾರ್ಯಕರ್ತರು ಸೇರಿದಂತೆ 350 ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ