ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಔಷಧ ಖರೀದಿಗಾಗಿ ರೋಗಿಗಳು ಸಿಕ್ಕಾಪಟ್ಟೆ ಹಣ ವ್ಯಯಿಸಿ ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು ಮುಂದಾಗಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಇನ್ನುಮುಂದೆ ರೋಗಿಗಳಿಗೆ ವೈದ್ಯರು ಜೆನೆರಿಕ್ ಔಷಧಗಳನ್ನೇ ಶಿಫಾರಸು ಮಾಡಬೇಕು ಎಂದು ಸೂಚನೆ ನೀಡಿದೆ.
ಹಣದ ಆಸೆಗೇನಾದರೂ ಜೆನರಿಕ್ ಔಷಧ ಸಲಹೆ ಮಾಡದೆ ಬ್ರಾಂಡೆಡ್ ಔಷಧಗಳನ್ನು ಬರೆದು ಕೊಟ್ಟರೆ ಅಂಥ ವೈದ್ಯರಿಗೆ ದಂಡ ವಿಧಿಸುವುದಲ್ಲದೆ ನಿಗದಿತ ವಧಿಗೆ ಅವರ ವೈದ್ಯಕೀಯ ಪರವಾನಗಿಯನ್ನು ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಆ.2ರಂದು ಪ್ರಕಟಗೊಂಡಿರುವ ವೈದ್ಯರ ಸೇವಾ ನಡತೆ ನಿಯಮಾವಳಿಗಳಲ್ಲಿ ಈ ಅಂಶವನ್ನು ಸಹ ಸೇರಿಸಲಾಗಿದೆ. ರೋಗಿಗಳಿಗೆ ಜೆನರಿಕ್ ಔಷಧವನ್ನೇ ಶಿಫಾರಸು ಮಾಡಬೇಕೆಂಬ ನಿಯಮ ಈಗಲೂ ಜಾರಿಯಿದ್ದರೂ 2002ರಲ್ಲಿ ಭಾರತೀಯ ವೈದ್ಯಕೀಯ ಮಂಡಳಿ ಬಿಡುಗಡೆ ಮಾಡಿದ್ದ ನಿಯಮಾವಳಿಗಳಲ್ಲಿ ಅದರ ಪ್ರಸ್ತಾಪ ಇರಲಿಲ್ಲ. ಹೀಗಾಗಿ ಹೊಸ ನಿಯಮಾವಳಿಗಳಲ್ಲಿ ಅದನ್ನು ಅಡಕ ಮಾಡಿ ಜಾರಿಗೊಳಿಸಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ